ಸುಳ್ಯ: ಸುಳ್ಯ ತಾಲೂಕಿನಾದ್ಯಂತ ಭಾನುವಾರ ಸಂಜೆ ಭಾರೀ ಮಳೆ ಸುರಿದಿದೆ. ಎರಡು ಗಂಟೆಗೂ ಹೆಚ್ಚು ಸಮಯದಿಂದ ಸುರಿದ ಕುಂಭದ್ರೋಣ ಮಳೆಗೆ ಅಲ್ಲಲ್ಲಿ ಆವಾಂತರ ಸೃಷ್ಠಿಯಾಗಿದೆ. ಎಲ್ಲೆಡೆ ನೀರು ತುಂಬಿ ಹರಿದಿದೆ. ಅಡಿಕೆ ತೋಟಗಳಿಗೆ ಮತ್ತಿತರ ಕೃಷಿ ಭೂಮಿಗೆ
ಮಳೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತವಾಗಿದ್ದವು. ಕಂದಡ್ಕ ಹೊಳೆ ತುಂಬಿ ಹರಿದು ಮುಂಡೋಕಜೆ ಭಾಗದಲ್ಲಿ ಹಲವು ಕಡೆ ತೋಟಗಳಿಗೆ ನೀರು ನುಗ್ಗಿದೆ, ಬೆಳ್ಳಾರೆ, ಕಳಂಜ ಸೇರಿದಂತೆ ವಿವಿಧ ಭಾಗಗಳಲ್ಲಿ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ಕಳಂಜ, ಕೆದಿಲ ರಸ್ತೆಗಳಗೆ ನುಗ್ಗಿದೆ.
ಮನೆಯ ಸುತ್ತ, ಅಂಗಳದಲ್ಲಿ ನೀರು ತುಂಬಿದೆ.ರಸ್ತೆಗೆ ಬರೆ ಜರಿದು ಬಿದ್ದಿದೆ. ವಿವಿಧ ಕಡೆಗಳಲ್ಲಿ ವಿದ್ಯುತ್ ಕಂಬ, ಲೈನ್ಗಳಿಗೆ ಹಾನಿ ಸಂಭವಿಸಿದೆ. ಭಾರಿ ಮಳೆಗೆ ಬರೆ ಜರಿದು ಮನೆಗೆ ಹನಿ
ಭಾರಿ ಮಳೆಗೆ ಎಲಿಮಲೆ, ಅಂಬೆಕಲ್ಲು ಎಂಬಲ್ಲಿ ಗುಡ್ದ ಕುಸಿದು ಛಾವಣಿಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿವುದಾಗಿ ತಿಳಿದು ಬಂದಿದೆ.ಸುಳ್ಯ ತಾಲೂಕು ಮಾತ್ರವಲ್ಲದೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಾಗೂ ಗಡಿ ಗ್ರಾಮಗಳಲ್ಲಿ ಭಾರೀ ಮಳೆಯಾಗಿದೆ.