ಸುಳ್ಯ:ಎಲ್ಲಾ ತರಹದ ಕ್ರೀಡಾ ಸಾಮಾಗ್ರಿಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಕ್ರೀಡಾ ಸಾಮಾಗ್ರಿಗಳ ಮಾರಾಟ ಮಳಿಗೆ ‘ಹೆಚ್ ಬಿ ಸ್ಪೋರ್ಟ್ಸ್ ಮ್ಯಾಕ್ಸ್’ ಜನವರಿ 11 ರಂದು ಶುಭಾರಂಭಗೊಳ್ಳಲಿದೆ. ಖಲಂದರ್ ಎಲಿಮಲೆ ಮಾಲಕತ್ವದ ಹೆಚ್ ಬಿ ಸ್ಪೋರ್ಟ್ಸ್ ಮ್ಯಾಕ್ಸ್ ಸುಳ್ಯ ಮೊಗರ್ಪಣೆಯ ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬಳಿಯ

ಮಾಣಿಬೆಟ್ಟು ಕಾಂಪ್ಲೆಕ್ಸ್ನಲ್ಲಿ ಜ.11ರಂದು ಪೂ.10ಕ್ಕೆ ಶುಭಾರಂಭಗೊಳ್ಳಲಿದೆ.ಕ್ರಿಕೆಟ್ ಬ್ಯಾಟ್, ವಿಕೆಟ್, ಬಾಲ್, ವಾಲಿಬಾಲ್, ಪುಟ್ಬಾಲ್, ನೆಟ್ ಸೇರಿದಂತೆ ಎಲ್ಲಾ ಕ್ರೀಡಾ ಸಾಮಾಗ್ರಿಗಳು, ಟ್ರೋಫಿ, ಮೊಮೆಂಟೊಗಳು, ಕ್ರೀಡಾ ಸಮವಸ್ತ್ರಗಳು, ಜರ್ಸಿಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಶಾಲಾ ಕಾಲೇಜುಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಾಗ್ರಿಗಳು, ಕ್ರೀಡಾ ಸಮವಸ್ತ್ರವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಹೆಚ್ ಬಿ ಸ್ಪೋರ್ಟ್ಸ್ ಮ್ಯಾಕ್ಸ್ ‘ನ ಮಾಲಕರಾದ ಖಲಂದರ್ ಎಲಿಮಲೆ ತಿಳಿಸಿದ್ದಾರೆ.







