ಆಕ್ಲ್ಲೆಂಡ್: ಟಿ20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ವೇಗದ ಶತಕ ಸಿಡಿಸಿದ ಪಾಕಿಸ್ತಾನದ ಆಟಗಾರ ಎನಿಸಿಕೊಂಡಿರುವ ಯುವ ಬ್ಯಾಟರ್ ಹಸನ್ ನವಾಝ್ ಬ್ಯಾಟಿಂಗ್ ನೆರವಿನಿಂದ ನ್ಯೂಝಿಲ್ಯಾಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ 9 ವಿಕೆಟ್ ಜಯ ದಾಖಲಿಸಿತು. 22ರ ಹರೆಯದ ಬಲಗೈ ಬ್ಯಾಟರ್ ಕೇವಲ 44 ಎಸೆತಗಳಲ್ಲಿ ಶತಕ ಪೂರೈಸಿದರು.ನವಾಝ್ 10 ಬೌಂಡರಿ ಹಾಗೂ
7 ಭರ್ಜರಿ ಸಿಕ್ಸರ್ಗಳನ್ನು ಸಿಡಿಸಿದರು.ಪಾಕಿಸ್ತಾನದ ನಾಯಕ ಸಲ್ಮಾನ್ ಆಘಾರಿಂದ ಬ್ಯಾಟಿಂಗ್ಗೆ ಇಳಿಸಲ್ಪಟ್ಟ ನ್ಯೂಝಿಲ್ಯಾಂಡ್ ತಂಡವು 19.5 ಓವರ್ಗಳಲ್ಲಿ 204 ರನ್ ಸವಾಲಿನ ಮೊತ್ತ ಗಳಿಸಿತು.ಗೆಲ್ಲಲು 205 ರನ್ ಗಳಿಸಿದ ಪಾಕಿಸ್ತಾನ ತಂಡ ಮಿಂಚಿನ ಆರಂಭ ಪಡೆದಿದ್ದು ಮೊದಲ ವಿಕೆಟ್ನಲ್ಲಿ 74 ರನ್ ಸೇರಿಸಿತು.ವಿಕೆಟ್ಕೀಪರ್-ಬ್ಯಾಟರ್ ಮುಹಮ್ಮದ್ ಹಾರಿಸ್ ಕೇವಲ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಿತ 41 ರನ್ ಗಳಿಸಿದರು.
ಹಾರಿಸ್ ಔಟಾದ ನಂತರ ನಾಯಕ ಸಲ್ಮಾನ್(ಔಟಾಗದೆ 51) ಜೊತೆ ಕೈಜೋಡಿಸಿದ ನವಾಝ್ ಭರ್ಜರಿ ಜೊತೆಯಾಟ ನಡೆಸಿ ಪಾಕಿಸ್ತಾನಕ್ಕೆ 9 ವಿಕೆಟ್ಗಳ ಅಂತರದಿಂದ ಗೆಲುವು ತಂದುಕೊಟ್ಟರು. ನವಾಝ್ ಔಟಾಗದೆ 105 ರನ್ ಗಳಿಸಿದರು.ಉಭಯ ತಂಡಗಳ ನಡುವೆ 4ನೇ ಟಿ20 ಪಂದ್ಯವು ಮೌಂಟ್ ಮೌಂಗನುಯಿಯಲ್ಲಿ ರವಿವಾರ(ಮಾ.23) ನಡೆಯಲಿದೆ. 5ನೇ ಹಾಗೂ ಅಂತಿಮ ಟಿ20 ಪಂದ್ಯವು ವೆಲ್ಲಿಂಗ್ಟನ್ನಲ್ಲಿ ಬುಧವಾರ(ಮಾ.26)ನಡೆಯಲಿರುವುದು.49 ಎಸೆತಗಳಲ್ಲಿ ಶತಕ ಸಿಡಿಸಿದ್ದ ಬಾಬರ್ ಆಝಮ್ ದಾಖಲೆಯನ್ನು ನವಾಝ್ ಮುರಿದರು.





