ಸುಳ್ಯ: ಯುವ ಉದ್ಯಮಿ ಲತೀಫ್ ಹರ್ಲಡ್ಕ ಅವರ ನಿವಾಸ ‘ಹರ್ಲಡ್ಕ ವಿಲ್ಲಾ’ಕ್ಕೆ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ನಿಸಾರ್ ಅಹಮ್ಮದ್ ಹಾಗೂ ಇತರ ಗಣ್ಯರು ಭೇಟಿ ನೀಡಿದರು. ಅನ್ಸಾರಿಯಾ ಗಲ್ಫ್ ಅಡಿಟೋರಿಯಂ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಹರ್ಲಡ್ಕ ವಿಲ್ಲಾಗೆ ಭೇಟಿ ನೀಡಿದರು. ಲತೀಫ್ ಹರ್ಲಡ್ಕ ಸ್ವಾಗತಿಸಿ, ಸನ್ಮಾನಿಸಿದರು.
ಅಲ್ಪ ಸಂಖ್ಯಾತ ಆಯೋಗದ
ಅಧ್ಯಕ್ಷ ನಿಸಾರ್ ಅಹಮ್ಮದ್, ಪ್ರಮುಖರಾದ ಡಾ.ಯು.ಕೆ.ಮೋನು ಕಣಚೂರು, ಜಿ.ಎ.ಬಾವಾ, ಮೂಸಬ್ಬ ಬ್ಯಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ನಿತ್ಯಾನಂದ ಮುಂಡೋಡಿ, ಟಿ.ಎಂ.ಶಹೀದ್ ತೆಕ್ಕಿಲ್, ಕೆ.ಎಂ.ಮುಸ್ತಫ, ಇಕ್ಬಾಲ್ ಎಲಿಮಲೆ, ಉಮ್ಮರ್ ಹಾಜಿ ಕಟ್ಟೆಕ್ಕಾರ್ಸ್,
ನೂರುದ್ದೀನ್ ಸಾಲ್ಮರ, ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್, ಜಿಲ್ಲಾ ವಕ್ಫ್ ಅಧಿಕಾರಿ ಎಂ.ಅಬೂಬಕ್ಕರ್ ಮತ್ತಿತರರು ಉಪಸ್ಥಿತರಿದ್ದರು.