ಸುಳ್ಯ: ಗಳೇಗೇಟು ಸಾಂಸ್ಕೃತಿಕ ಸಂಘದ ವತಿಯಿಂದ3 ದಿನಗಳ ಕಾಲ ನಡೆದ 40ನೇ ವರ್ಷದ ಗಣೇಶೋತ್ಸವ ವೈಭವದ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು. ವಿವಿಧ ಧಾರ್ಮಿಕ ಹಾಗೂ
ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ ಗಣೇಶೋತ್ಸವದ ವೈಭವದ ಶೋಭಾಯಾತ್ರೆ ನಗರದಲ್ಲಿ ಸಾಗಿದ ಬಳಿಕ ಬ್ರಹ್ಮರಗಯದಲ್ಲಿ ಗಣೇಶನ ವಿಗ್ರಹವನ್ನು ಜಲಸ್ತಂಭನಗೊಳಿಸುವುದರೊಂದಿಗೆ ಸಮಾಪನಗೊಂಡಿತು. ಚೆಂಡೆ, ವಾದ್ಯ ಮೇಳಗಳು, ದೀಪಾಲಂಕಾರಗಳು ಶೋಭಾಯಾತ್ರೆಗೆ ಮೆರುಗು ತಂದಿತು.









