ಸುಳ್ಯ: 2023-24 ನೇ ಶೈಕ್ಷಣಿಕ ಸಾಲಿನ ಎಸ್ಸೆಲ್ಸಿಸಿ ಫಲಿತಾಂಶ ಪ್ರಕಟವಾಗಿದ್ದು ಗುತ್ತಿಗಾರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗವು 94.44 ಫಲಿತಾಂಶ ಪಡೆದಿದೆ.
90ವಿದ್ಯಾರ್ಥಿಗಳು ಪರೀಕ್ಷೆಗೆ
ಹಾಜರಾಗಿದ್ದು 85 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ನಮಿತಾ ಮಾರಿಯಾ ಕ್ಯಾಸ್ಟಲಿನೋ 617 ಅಂಕ ಪಡೆದುಕೊಂಡಿದ್ದಾರೆ. ಇವರು ಗುತ್ತಿಗಾರು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ನೆಲ್ಸನ್ ಕ್ಯಾಸ್ಟಲಿನೊ ಮತ್ತು ಮೆಟಿಲ್ಲಾ ಡಿಸೋಜಾ ಅವರ ಪುತ್ರಿ.
ಇತರ ವಿದ್ಯಾರ್ಥಿಗಳಾದ ಕನಿಕ 585, ಅನುಷ್ ದೇರಾಜೆ 538, ಪ್ರಖ್ಯಾತ್.ಯಂ,537 ಲಾಲಿತ್ಯ ಬಿ.ಟಿ 535 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.







