ಸುಳ್ಯ: ಸುಳ್ಯ ಜಟ್ಟಿಪಳ್ಳದ ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ ಸಮೀಪ ಅನ್ಸಾರಿಯಾ ಗಲ್ಫ್ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ನಿರ್ಮಿಸಿದ ಅನ್ಸಾರಿಯಾ ಗಲ್ಫ್ ಅಡಿಟೋರಿಯಂನ ಉದ್ಘಾಟನೆಯ ಪ್ರಯುಕ್ತ ಸುಳ್ಯದ ಅನಿವಾಸಿ ಭಾರತೀಯರ ಸಂಗಮ ‘ಗಲ್ಫ್ ಮೀಟ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಅನಿವಾಸಿ ಭಾರತೀಯರ ಶ್ರಮದ ಫಲವಾಗಿ ಸುಳ್ಯದಲ್ಲಿ ಸುಂದರ ಅಡಿಟೋರಿಯಂ ನಿರ್ಮಾಣವಾಗಿದೆ ಎಂದು
ಸಮಾರಂಭದಲ್ಲಿ ಮಾತನಾಡಿದ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಯ್ಯಿದ್ ಅಬ್ದುರ್ರಹ್ಮಾನ್ ಮಶ್ಹೂದ್ ಅಲ್ ಬುಖಾರಿ ತಂಙಳ್ ಕೂರ ದುವಾಃ ನೆರವೇರಿಸಿದರು. ಎಂ.ಬಿ. ಮುಹಮ್ಮದ್ ಮದನಿ ಅನ್ಸಾರಿಯಾ ದಮಾಮ್ ಉದ್ಘಾಟನೆ ನೆರವೇರಿಸಿದರು.ಡಾ.ಅಬ್ದುರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ ಮುಖ್ಯ ಭಾಷಣ ಮಾಡಿದರು.
ಎಜಿಸಿಸಿ ಉಪಾಧ್ಯಕ್ಷ ಮುನೀರ್ ಜಟ್ಟಿಪಳ್ಳ ಅಧ್ಯಕ್ಷತೆ ವಹಿಸಿ ಮಾತನಾಡಿ’ ಅನಿವಾಸಿ ಭಾರತೀಯರ ಪ್ರತಿಯೊಬ್ಬರ ಶ್ರಮದ ಫಲವಾಗಿ ಸುಂದರ ಅಡಿಟೀರಿಯಂ ನಿರ್ಮಾಣ ಆಗಿದೆ, ಇದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ನಸೀಹ್ ದಾರಿಮಿ ಬೆಳ್ಳಾರೆ, ಮುನೀರ್ ಸಾ-ಆದಿ ಅಲ್ ಅರ್ಷದಿ ಜಾಲ್ಸೂರ್ ಅಡ್ಕಾರ್, ಯೂಸುಫ್ ಸ-ಆದಿ ಅಯ್ಯಂಗೇರಿ, ಉಮ್ಮರ್ ಮುಸ್ಲಿಯಾರ್ ಮರ್ದಾಳ,ಅನ್ಸಾರಿಯಾ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಅನ್ಸಾರಿಯಾ ಗಲ್ಪ್ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಸಲೀಂ ಇಸ್ಮಾಯಿಲ್, ಕೋಶಾಧಿಕಾರಿ ಹಾಜಿ ಎಸ್.ಎಂ ಅಬ್ದುಲ್ ಹಮೀದ್ ಗಲ್ಫ್ ಸಮಿತಿ ಪ್ರತಿನಿಧಿಗಳಾದ
ಜನಾಬ್ ಸಿದ್ದಿಕ್ ಹಳೆಗೇಟ್, ಕಮಾಲ್ ಅಜ್ಜಾವರ, ಲತೀಫ್ ಕುತ್ತಮೊಟ್ಟೆ, ಟಿ.ಎಂ.ಶಹೀದ್ ತೆಕ್ಕಿಲ್, ಉಮ್ಮರ್ ಬೀಜದಕಟ್ಟೆ, ಆದಂ ಹಾಜಿ ಕಮ್ಮಾಡಿ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಬ್ದುಲ್ಲ ಹಿಮಮಿ ಸಖಾಫಿ ಸ್ವಾಗತಿಸಿದರು. ಅನ್ಸಾರಿಯಾ ಕಾರ್ಯದರ್ಶಿ
ಶರೀಫ್ ಜಟ್ಟಿಪಳ್ಳ ವಂದಿಸಿದರು. ಎ.ಬಿ.ಕಮಾಲ್, ಇಕ್ಬಾಲ್ ಕನಕಮಜಲು ಕಾರ್ಯಕ್ರಮ ನಿರೂಪಿಸಿದರು.