ಸುಳ್ಯ: ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತಾಲೂಕು ಮಟ್ಟದ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಜಿಲ್ಲೆಯ ವಿವಿಧ ತಾಲೂಕುಗಳ ಸಮಿತಿ ಸದಸ್ಯರ
ನೇಮಕ ಮಾಡಿದ್ದಾರೆ. ಅಧ್ಯಕ್ಷರ ನೇಮಕ ಈ ಹಿಂದೆ ನಡೆದಿತ್ತು ಸದಸ್ಯರ ನೇಮಕ ಇದೀಗ ನಡೆದಿದೆ. ಸುಳ್ಯ ತಾಲೂಕು ಸಮಿತಿ
ಅಧ್ಯಕ್ಷರಾಗಿ ಶಾಹುಲ್ ಹಮೀದ್ ಕುತ್ತಮೊಟ್ಟೆ ಸದಸ್ಯರಾಗಿ ರವಿ ಗುಂಡಡ್ಕ ನಾಲ್ಕೂರು ಗ್ರಾಮ, ಭವಾನಿ ಶಂಕರ ಕಲ್ಮಡ್ಕ, ವಿಜೇಶ್ ಹಿರಿಯಡ್ಕ, ಕಾಂತಿ ಬಿ. ಎಸ್. ಕಲ್ಲುಗುಂಡಿ, ಭವಾನಿ ಬೊಮ್ಮೆಟ್ಟಿ ಕಲ್ಮಡ್ಕ, ಧನುಶ್ ಕುಕ್ಕೆಟಿ ಮಂಡೆಕೋಲು, ಸೋಮಶೇಖರ ಕೇವಳ ಮುಡಪಾಡಿ, ರಾಜು ನೆಲ್ಲಿಕುಮೇರಿ (ಜ್ಞಾನಶೀಲ) ಕಲ್ಲುಗುಂಡಿ, ಎ.ಬಿ. ಅಬ್ಬಾಸ್
ಅಜ್ಜಾವರ, ಈಶ್ವರ ಆಳ್ವ ಬೇರ್ಯ,ಕೊಡಿಯಾಲ, ಲತೀಪ್ ಅಡ್ಕಾರ್, ಮಣಿಕಂಠ ಕೊಳಗೆ ಕೊಲ್ಲಮೊಗ್ರು, ಶೇಖರ ಮಣಿಯಾಣಿ ಕಣೆಮರಡ್ಕ ಮಂಡೆಕೋಲು, ಶಿಲ್ಪ ಇಬ್ರಾಹಿಂ ಸುಳ್ಯ ಅವರನ್ನು ನೇಮಕ ಮಾಡಲಾಗಿದೆ. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ,
ಸದಸ್ಯ ಕಾರ್ಯದರ್ಶಿ ಯಾಗಿರುತ್ತಾರೆ.