ಜೈಪುರ: ಬೃಹತ್ ಮೊತ್ತ ಬೆನ್ನಟ್ಟಿದ ಗುಜರಾತ್ ಟೈಟನ್ಸ್ಗೆ ಐಪಿಎಲ್ ಪಂದ್ಯದ ಕೊನೆಯ ಎಸೆತದಲ್ಲಿ 3 ವಿಕೆಟ್ಗಳ
ರೋಚಕ ಗೆಲುವು. ರಾಜಸ್ಥಾನ ರಾಯಲ್ಸ್ ತಂಡಕ್ಕೆ ಟೂರ್ನಿಯಲ್ಲಿ ಮೊದಲ ಸೋಲು.197 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಟೈಟನ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ199 ರನ್ ಗಳಿಸಿತು. ತಂಡಕ್ಕೆ ಶುಭಮನ್ ಗಿಲ್ (72; 44ಎ, 4X6, 6X2) ಹಾಗೂ ಸಾಯಿ ಸುದರ್ಶನ್ (35 ರನ್) ಅವರು ಉತ್ತಮ ಅಡಿಪಾಯ ಹಾಕಿದರು. ಬಳಿಕ
ರಾಹುಲ್ ತೆವಾಟಿಯಾ (22; 11ಎ) ಮತ್ತು ರಶೀದ್ ಖಾನ್ (ಔಟಾಗದೆ 24; 11ಎ) ಗೆಲುವಿನ ದಡ ಸೇರಿಸಿದರು. ಶಾರೂಕ್ ಖಾನ್ (14; 8ಎ) ಕೂಡ ಮಹತ್ವದ ಕಾಣಿಕೆ ನೀಡಿದರು. ತೆವಾಟಿಯಾ ಹಾಗೂ ರಶೀದ್ ಖಾನ್ ಆಕರ್ಷಕ ಬೌಂಡರಿಗಳ ಸುರಿ ಮಳೆ ಸುರಿಸಿದರು. ಕೊನೆಯ ಎಸೆತವನ್ನು ಬೌಂಡರಿಗಟ್ಟಿ ರಶೀದ್ ಖಾನ್ ಗೆಲುವಿನ ನಗೆ ಬೀರಿದರು. ರಾಯಲ್ಸ್ ತಂಡದ ಕುಲದೀಪ್ ಸೇನ್ (41ಕ್ಕೆ3) ಮತ್ತು ಯಜುವೇಂದ್ರ ಚಾಹಲ್ (43ಕ್ಕೆ2) ಅವರ ಆಟಕ್ಕೆ ಜಯ ಒಲಿಯಲಿಲ್ಲ.
ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರಾಜಸ್ಥಾನ ತಂಡವು 20 ಓವರ್ಗಳಲ್ಲಿ 3 ವಿಕೆಟ್ಗಳಿಗೆ 196 ರನ್ಗಳ ಬೃಹತ್ ಮೊತ್ತ ಪೇರಿಸಿತು. ಯಶಸ್ವಿ ಜೈಸ್ವಾಲ್ (24; 19ಎ) ಸಂಜು ಸ್ಯಾಮ್ಸನ್ (ಔಟಾಗದೆ 68; 38ಎ, 4X7,6X2) ಮತ್ತು ರಿಯಾನ್ (76; 48ಎ, 4X3, 6X5) ತಂಡಕ್ಕೆ ಉತ್ತಮ ಮೊತ್ತ ಪೇರಿಸಲು ಕಾರಣವಾಯಿತು. ಸಂಜು, ಪರಾಗ್ ಜೋಡಿ ಕೊನೆಯ 10 ಓವರ್ಗಳಲ್ಲಿ 123 ರನ್ ಸೇರಿಸಿದರು.