ಸುಳ್ಯ: ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸುಳ್ಯ ಜಟ್ಟಿಪಳ್ಳದ ಗ್ರೀನ್ವ್ಯೂ ಆಂಗ್ಲ ಮಾಧ್ಯಮ ಸ್ಕೂಲ್. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಿರಂತರ ಶೇ.100 ಫಲಿತಾಂಶ ದಾಖಲಿಸುತ್ತಿರುವ ಗ್ರೀನ್ ವ್ಯೂ ಶಾಲೆಯಲ್ಲಿ 2024-25ನೇ ಸಾಲಿನಲ್ಲಿ ದಾಖಲಾತಿ ಆರಂಭಗೊಂಡಿದೆ.
ಗ್ರೀನ್ ವ್ಯೂ ಸಂಸ್ಥೆಯಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ, ಎಲ್ಕೆಜಿ, ಯುಕೆಜಿ, ಪ್ರೀಕೆಜೆ, ಪ್ಲೇ ಹೋಂ ತರಗತಿಗಳಿವೆ.
ಗುಣಮಟ್ಟದ ಶಿಕ್ಷಣದ
ಗುರಿಯೊಂದಿಗೆ ಕಾರ್ಯಾಚರಿಸುವ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಿರಂತರ ಶೇ.100 ಫಲಿತಾಂಶ ದಾಖಲಿಸುತಿದೆ. ಈ ಬಾರಿ ಪರೀಕ್ಷೆ ಬರೆದ 30 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ಬಂದಿದೆ.
ಶಿಕ್ಷಣದಲ್ಲಿ ತೀರಾ ಹಿಂದುಳಿದ ಮುಸ್ಲಿಂ ಹಾಗೂ ಇತರ ಸಮುದಾಯವನ್ನು

ಸಮಾಜದ ಮುಖ್ಯವಾಹಿನಿಗೆ ತರುವ ಗುರಿಯೊಂದಿಗೆ ಸುಮಾರು 3 ದಶಕಗಳ ಹಿಂದೆ ಈ ಶಿಕ್ಷಣ ಸಂಸ್ಥೆ ಆರಂಭಗೊಂಡಿತು. ಅಂದಿನಿಂದ ಇಂದಿನವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಧಾರೆಯೆರೆದು ಬಾಳಿನಲ್ಲಿ ಬೆಳಕಾಗಿದೆ. ಆ ಮೂಲಕ ಶಿಕ್ಷಣ ಕಾಶಿಯಾದ ಸುಳ್ಯದ ವಿದ್ಯಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಉತ್ತಮ ಶಿಕ್ಷಣ ಪಡೆದು ಮಕ್ಕಳು ಮಾನಸಿಕವಾಗಿ, ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ ಸಿದ್ಧವಾಗಿ ಎಲ್ಲಾ ರೀತಿಯಲ್ಲಿ ಪ್ರಬುದ್ಧರಾಗಿ ಮುಂದಿನ ಸ್ಪರ್ಧಾ ಜಗತ್ತನ್ನು ಎದುರಿಸಲು ಸದೃಢರಾಗುವಂತೆ ಮಾಡುವುದು ಸಂಸ್ಥೆಯ ಧ್ಯೇಯ. ಸಮಾಜದ ಎಲ್ಲಾ ವರ್ಗದ ಜನರಿಗೆ ಅದರಲ್ಲೂ ಸಾಮಾನ್ಯ ವರ್ಗದವರಿಗೆ ಹೆಚ್ಚು ಅನುಕೂಲವಾಗುವಂತೆ ಕಡಿಮೆ ಶುಲ್ಕದೊಂದಿಗೆ ಹಸಿರು ಪರಿಸರದಲ್ಲಿ ಉತ್ತಮ ಶಿಕ್ಷಣವನ್ನು ನೀಡಲಾಗುತಿದೆ.

ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ, ಪ್ರಿ ಕೆಜಿ, ಪ್ಲೇ ಹೋಂ, ಪ್ರಾಥಮಿಕ 1 ರಿಂದ 7 ಹಾಗೂ ಪ್ರೌಢಶಾಲೆ 8 ಮತ್ತು 10 ನೇ ತರಗತಿ ನಡೆಯುತ್ತಿದೆ. ಪೂರ್ವ ಪ್ರಾಥಮಿಕದಿಂದ 10 ನೇ ತರಗತಿವರೆಗೆ ನುರಿತ ಹಾಗೂ ಅನುಭವಿ ಶಿಕ್ಷಕರಿಂರ ತರಗತಿಗಳನ್ನು ನಡೆಸಲಾಗುತಿದೆ. ಕ್ರೀಡೆ, ಕಲೆ, ಸಾಂಸ್ಕೃತಿಕ ಹಾಗೂ ಇತರ ಪಠ್ಯೇತರ ಚಟುವಟಿಕೆಗಳಿಗೂ ಶಾಲೆಯಲ್ಲಿ ಪ್ರಾಮುಖ್ಯತೆ ನೀಡಲಾಗುತ್ತದೆ. ಪ್ರತಿ ವರ್ಷ ಕ್ರೀಡಾಕೂಟ, ಸಾಂಸ್ಕೃತಿಕ ಹಬ್ಬಗಳ ಜೊತೆಗೆ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಹಾಗೂ ಬೌದ್ಧಿಕೆ ಬೆಳವಣಿಗೆಗೆ ಪೂರಕವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತಿದೆ. ಸಹ ಪಠ್ಯ ಚಟುವಟಿಕೆಗಳಾದ ಸ್ಕೌಟ್ಸ್, ಗೈಡ್ಸ್, ಕಬ್ ಬುಲ್ ಬುಲ್, ಕ್ರಾಪ್ಟ್ & ಚಿತ್ರ ಕಲೆಗೆ ಆದ್ಯತೆ ನೀಡಲಾಗುತ್ತದೆ. ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲಾಗುತ್ತಿದ್ದು ಪುಟ್ಬಾಲ್ ಸೇರಿದಂತೆ ವಿವಿಧ ಕ್ರೀಡೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಜಿಲ್ಲೆ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಾಲೆಯ ವಿಶೇಷತೆಗಳು:
ನಗರ ವ್ಯಾಪ್ತಿಯಲ್ಲಿಯೇ ಇದ್ದರೂ ಸುತ್ತಲೂ ಹಸಿರು ಹೊದ್ದಿರುವ ಪ್ರಶಾಂತ ವಾತಾವರಣದಲ್ಲಿ ಹೆಸರಿಗೆ ತಕ್ಕಂತೆ ಗ್ರೀನ್ ಪರಿಸರದಲ್ಲಿ
ಗ್ರೀನ್ವ್ಯೂ ಶಾಲೆ ಇದೆ.
ಅತ್ಯಾಧುನಿಕ ಶೈಲಿಯ ಸುಸಜ್ಜಿತ ತರಗತಿ ಕೊಠಡಿಗಳು,
ನುರಿತ ಹಾಗೂ ಅನುಭವಿ ಶಿಕ್ಷಕ ವೃಂದ,
ಒಂದನೇ ತರಗತಿಯಿಂದಲೇ ಕಂಪ್ಯೂಟರ್ ತರಬೇತಿ ಸೌಲಭ್ಯ.
ಪ್ಲೇ ಪಾರ್ಕ್ ಸೌಲಭ್ಯದೊಂದಿಗೆ ವಿಶಾಲ ಆಟದ ಮೈದಾನ.
ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ.
ನಿರಂತರ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು, ಸುಂದರವಾದ ಕಿಡ್ಸ್ ಗಾರ್ಡನ್, ಸಿಸಿ ಕ್ಯಾಮರಾ ಅಳವಡಿಸಿರುವ ವಿಶಾಲ ಕ್ಯಾಂಪಸ್.
ಸ್ಪೋರ್ಟ್ಸ್ & ಗೇಮ್ಸ್ಗೆ ಪ್ರೋತ್ಸಾಹ. ಇದು ಶಾಲೆಯ ವಿಶೇಷತೆ.
ಗ್ರೀನ್ವ್ಯೂ ಶಿಕ್ಷಣ ಸಂಸ್ಥೆ ಅನ್ಸಾರಿಯಾ ಎಜುಕೇಶನ್ ಸೆಂಟರ್ನ ಅದೀನ ಸಂಸ್ಥೆ.ಅನ್ಸಾರಿಯಾ ಎಜುಕೇಶನ್ ಸೆಂಟರ್ ಅದೀನದಲ್ಲಿ ಅನ್ಸಾರಿಯಾ ಧಾರ್ಮಿಕ ಲೌಕಿಕ ಶಿಕ್ಷಣ ದಅವ ಕಾಲೇಜು, ಅನಾಥ ಮಕ್ಕಳ ಹೋಂ ಕೇರ್ ಯುನಿಟ್, ಮದ್ರಸ ಶಿಕ್ಷಣ, ಮಹಿಳಾ ಶರೀಅತ್ ಕಾಲೇಜು, ಹಿಫಳುಲ್ ಖುರ್ ಅನ್ ಸ್ಥಾಪನಗಳು ನಡೆಯುತ್ತಿದೆ
2024-25 ದಾಖಲಾತಿ ಆರಂಭಗೊಂಡಿದ್ದು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.
8296754 421
9901722897
7349 055 005
9108 630 256










