ಸಂಪಾಜೆ:ಸಂಪಾಜೆ ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ತಾಲೂಕು ಪಂಚಾಯತ್ ವತಿಯಿಂದ ನೀಡಿದ 2 ಲ್ಯಾಪ್ಟಾಪ್,1 ಕಂಪ್ಯೂಟರ್, ಟ್ಯಾಬ್, ಮೊಬೈಲ್, 13 ಚಯರ್. ಕವಾಟು ಉದ್ಘಾಟನೆ ಕಾರ್ಯಕ್ರಮ ಗ್ರಂಥಾಲಯದಲ್ಲಿ ನಡೆಯಿತು.. ಲ್ಯಾಪ್ ಟಾಪ್ ಉದ್ಘಾಟನೆಯನ್ನು
ಗ್ರಾಮ ಪಂಚಾಯತ್ ಅಧ್ಯಕ್ಷ ಸುಮತಿ ಶಕ್ತಿವೇಲು ನೆರವೇರಿಸಿದರು, ಕಂಪ್ಯೂಟರ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉದ್ಘಾಟನೆ ಮಾಡಿದರು.ಇದನ್ನು ತರಿಸುವಲ್ಲಿ ಪ್ರಯತ್ನಿಸಿದ ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಹಾಗೂ ಉಪಾಧ್ಯಕ್ಷ ಎಸ್. ಕೆ. ಹನೀಫ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಉಪಾಧ್ಯಕ್ಷ ಎಸ್ ಕೆ.ಹನೀಫ್ ಗ್ರಂಥಾಲಯದ ಮೊಬೈಲ್ ಉದ್ಘಾಟನೆ ಮಾಡಿದರು. ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಟ್ಯಾಬ್ ಉದ್ಘಾಟನೆ. ಮಾಡಿದರು. ಮಾಜಿ ಅಧ್ಯಕ್ಷೆ ಸುಂದರಿ ಮುಂಡಡ್ಕ, ಸದಸ್ಯರಾದ ವಿಮಲಾ ಪ್ರಸಾದ್, ಲಿಸ್ಸಿ ಮೊನಾಲಿಸಾ, ಕಾರ್ಯದರ್ಶಿ ಪದ್ಮಾವತಿ ಸಾಮಾಜಿಕ ಲೆಕ್ಕ ಪರಿಶೀಲನೆ ಸಂಯೋಜಕರಾದ ಸೌಮ್ಯ ಉಪಸ್ಥಿತರಿದ್ದರು.









