ಸುಳ್ಯ:ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಸಹಯೋಗದೊಂದಿಗೆ ಸುಳ್ಯ ನಗರ ಗೌಡ ಸಮಿತಿ, ಮಹಿಳಾ ಘಟಕ ಮತ್ತು ತರುಣ ಘಟಕಗಳ ನೇತೃತ್ವದಲ್ಲಿ ಆಟಿಯ ಸಂಭ್ರಮ ಕಾರ್ಯಕ್ರಮ ಆ.4ರಂದು ಕೊಡಿಯಾಲಬೈಲ್ ಗೌಡ ಸಮುದಾಯ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು
ನಿವೃತ್ತ ಅಧ್ಯಾಪಕರಾದ ಕುದ್ಪಾಜೆ ಸೋಮಯ್ಯ ಗೌಡರು ಹಾಗೂ ಪತ್ನಿ ಪದ್ಮಾವತಿ ಸೋಮಯ್ಯ ಗೌಡರು ದೀಪ ಬೆಳಗಿಸಿ ಉದ್ಘಾಟಿಸಿದರು. ನಗರ ಗೌಡ ಸಮಿತಿ ಅಧ್ಯಕ್ಷ ರಾಕೇಶ್ ಕುಂಟಿಕಾನ ಅಧ್ಯಕ್ಷತೆ ವಹಿಸಿದ್ದರು. ಇಂದಿರಾ ರಘುರಾಮ್ ಮಾಣಿಬೆಟ್ಟು ಹಾಗೂ ಸುಳ್ಯ ನಗರ ಮಹಿಳಾ ಗೌಡ ಸಮಿತಿ ಅಧ್ಯಕ್ಷೆ ಹರ್ಷ ಕರುಣಾಕರ ಗೌರವ ಉಪಸ್ಥಿತರಿದ್ದರು.ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ, ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ತಾಲೂಕು ತರುಣ ಘಟಕದ ಅಧ್ಯಕ್ಷ ಪ್ರೀತಂ ಡಿ.ಕೆ., ನ.ಪಂ. ಸದಸ್ಯೆ ಶೀಲಾ ಕುರುಂಜಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೋಮಯ್ಯ ಮಾಸ್ತರ್ ಹಾಗೂ ಪದ್ಮಾವತಿಯವರನ್ನು ಮತ್ತು ಇಂದಿರಾ ರಘುರಾಮರನ್ನು ಗೌರವಿಸಿ ಸನ್ಮಾನಿಸಲಾಯಿತು.ಐ.ಬಿ.ಚಂದ್ರಶೇಖರ ಸ್ವಾಗತಿಸಿ, ರಾಧಾಕೃಷ್ಣ ಕುಂತಿನಡ್ಕ ವಂದಿಸಿದರು. ಶಶಿಧರ ಎಂ.ಜೆ. ಹಾಗೂ ಲತಾ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿವಿಧ ಆಟಿ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು.