ಗೂನಡ್ಕ:ಎಸ್.ಜೆ.ಎಂ.ವತಿಯಿಂದ ಜರುಗಿದ ರಾಜ್ಯ ಮಟ್ಟದ ಮೆಹರ್ ಜಾನ್ ಸ್ಪರ್ಧೆಯ ಅರೆಬಿಕ್ ಭಾಷಣದಲ್ಲಿ ದ್ವಿತೀಯ ಸ್ಥಾನ ಪಡೆದ ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಮಹಮ್ಮದ್ ಅಲೀ ಸಖಾಫಿಯವರನ್ನು ಗೂನಡ್ಕದ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ
ಶಾಲು ಹೊದಿಸಿ ಅಭಿನಂದಿಸಲಾಯಿತು.ಈ ಸಂದರ್ಭ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಗೌರವಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಅಧ್ಯಕ್ಷರಾದ ಜಾಫರ್ ಸಾದಿಕ್ ಕುಂಭಕ್ಕೋಡ್ ಗೂನಡ್ಕ, ಜಮಾಅತ್ ಸಮಿತಿಯ ಕಾರ್ಯದರ್ಶಿ ಎ.ಟಿ.ಅಶ್ರಫ್, ಅಲ್ ಅಮೀನ್ ಪದಾಧಿಕಾರಿಗಳಾದ ಎ.ಟಿ.ಹಸನ್, ಮಹಮ್ಮದ್ ಪೆಲ್ತಡ್ಕ, ಡಿ.ಎಂ.ಅಬ್ದುಲ್ಲ, ಟಿ.ಬಿ.ಅಝೀಝ್, ಜಿ.ಎಂ.ಅಬ್ದುಲ್ಲ, ಮಿರ್ಶಾದ್, ನೌಶಾದ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕ ಉಪಸ್ಥಿತರಿದ್ದರು.







