ಅಡ್ಕಾರ್:ದೀಪಾವಳಿ ಪ್ರಯುಕ್ತ ಚಂದ್ರಯಾನದ ಪರಿಕಲ್ಪನೆಯಲ್ಲಿ ತಯಾರಿಸಿದ ಗೂಡುದೀಪ ವಿಶೇಷ ಗಮನ ಸೆಳೆಯಿತು.ಅಡ್ಕಾರಿನ ‘ವೈಫೈ ಗೆಳೆಯರ’ ಬಳಗ ಈ ವಿನೂತನ ಶೈಲಿಯ ಗೂಡುದೀಪ

ರಚಿಸಿದ್ದಾರೆ.ದೀಪಾವಳಿಗೆ ವಿಭಿನ್ನ ಪರಿಕಲ್ಪನೆಯಲ್ಲಿ ‘ಗೂಡುದೀಪ ‘ರಚಿಸುತ್ತಾ ಬಂದಿರುವ ‘ವೈಫೈ ಗೆಳೆಯರ’ ಬಳಗ ಬಾರಿ ಇಸ್ರೋದ ‘ಚಂದ್ರಯಾನ-3’ಪರಿಕಲ್ಪನೆಯಲ್ಲಿ ವಿಕ್ರಮ್ ಲ್ಯಾಂಡರ್ ಹಾಗೂ ಇಸ್ರೋ ಉಡಾಯಿಸಿದ ರಾಕೆಟ್ ಇಂಜಿನ್ ಮಾದರಿ ಗೂಡುದೀಪ ತಯಾರಿಸಿದೆ. ಅಡ್ಕಾರ್ ಪರಿಸರದಲ್ಲಿ ಈ ಗೂಡುದೀಪಗಳು ನೋಡುಗರ ಕಣ್ಮನ ಸೆಳೆಯುತ್ತಿದೆ.









