ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ನಲ್ಲಿ ನಾಯಕ ರೋಹಿತ್ ಶರ್ಮ ಹಾಗೂ ಶುಭಮನ್ ಗಿಲ್ ಆಕರ್ಷಕ ಶತಕ ಸಿಡಿಸಿದ್ದಾರೆ. ಇವರ ಶತಕದ ನೆರವಿನಿಂದ ಎರಡನೇ ದಿನವಾದ ಇಂದು ಇತ್ತೀಚಿನ ವರದಿ ಬಂದಾಗ ಭಾರತ ಒಂದು ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ. 102 ರನ್ ಗಳಿಸಿದ ರೋಹಿತ್ ಶರ್ಮ ಹಾಗೂ 102 ರನ್ ಗಳಿಸಿದ ಗಿಲ್
ಕ್ರೀಸಿನಲ್ಲಿದ್ದಾರೆ. 160 ಎಸೆತಗಳಲ್ಲಿ 13 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ನೆರವಿನಿಂದ ರೋಹಿತ್ 102 ರನ್ ಗಳಿಸಿದರೆ, 144 ಎಸೆತಗಳಲ್ಲಿ ಬೌಂಡರಿ 10 ಹಾಗೂ 5 ಭರ್ಜರಿ ಸಿಕ್ಸರ್ ನೆರವಿನಿಂದ ಗಿಲ್ 102 ರನ್ ಗಳಿಸಿದರು. ಒಂದು ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದಲ್ಲಿಂದ ಭಾರತ ಇನಿಂಗ್ಸ್ ಮುಂದುವರಿಸಿತ್ತು. ಯಶಸ್ವಿ ಜೈಸ್ವಾಲ್ 57 ರನ್ ಗಳಿಸಿ ಔಟ್ ಆದರು. ರೋಹಿತ್ ಹಾಗೂ ಜೈಸ್ವಾಲ್ ಮೊದಲ ವಿಕೆಟ್ಗೆ 104 ರನ್ ಹಾಗೂ ರೋಹಿತ್ ಹಾಗೂ ಗಿಲ್ ಮುರಿಯದ ಎರಡನೇ ವಿಕೆಟ್ಗೆ 161 ರನ್ ಜೊತೆಯಾಟ ನಡೆಸಿದರು.
ಈ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಕುಲದೀಪ್ ಯಾದವ್ (72ಕ್ಕೆ 5) ಹಾಗೂ ರವಿಚಂದ್ರನ್ ಅಶ್ವಿನ್ (51ಕ್ಕೆ 4) ಸ್ಪಿನ್ ದಾಳಿಗೆ ಸಿಲುಕಿ ಮೊದಲ ಇನಿಂಗ್ಸ್ನಲ್ಲಿ 57.4 ಓವರ್ಗಳಲ್ಲಿ 218 ರನ್ಗಳಿಗೆ ಆಲೌಟ್ ಆಗಿದೆ.














