ಚೊಕ್ಕಾಡಿ:ದ.ಕ.ಹಿ. ಪ್ರಾಥಮಿಕ ಶಾಲೆ ಅಮರಪಡ್ನರೂ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಪುಸ್ತಕ ವಿತರಣಾ ಕಾರ್ಯಕ್ರಮ ಚೊಕ್ಕಾಡಿ ಗರುಡ ಯುವಕ ಮಂಡಲದ ಆಶ್ರಯದಲ್ಲಿ ನಡೆಯಿತು. ಸಭಾ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರು ಯತಿನ್ ಕೊಳಂಬೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ
ಶಾಲಾ ಎಸ್.ಡಿ.ಎಂ ಅಧ್ಯಕ್ಷರಾದ ಈಶ್ವರ ಕಾಯರ, ಶಾಲಾ ಮುಖ್ಯಪಾಧ್ಯಾಯ ರೂಪವಾಣಿ, ಯುವಜನ ಸಯುಕ್ತ ಮಂಡಳಿಯ ಮಾಜಿ ಅಧ್ಯಕ್ಷ ತೇಜಸ್ವಿ ಕಡಪಳ, ನಿರ್ದೇಶಕರು ಮುರಳಿ ನಳಿಯಾರು ಉಪಸ್ಥಿತರಿದ್ದರು. ಯುವಕ ಮಂಡಲದ ಪೂರ್ವಧ್ಯಕ್ಷ ಮನೋಜ್ ಪಡ್ಪು ಸ್ವಾಗಿಸಿದರು, ಶರಣು ಕರ್ಮಜೆ ವಂದಿಸಿದರು. ಯುವಕ ಮಂಡಲದ ಕಾರ್ಯದರ್ಶಿ ಅರುಣ್ ಪರಮಲೆ ಕಾರ್ಯಕ್ರಮ ನಿರೂಪಿಸಿದರು. ಪುಸ್ತಕ ದಾನಿಗಳಾದ ಅಭಿಷೇಕ್ ಪಡ್ಪು, ಅನುಷಾ ಪಡ್ಪು, ರಮ್ಯಾ ಪಡ್ಪು, ಮುರಳಿ ನಳಿಯರು, ಅಕ್ಷಯ್ ಬೊಬ್ಬೆಕೇರಿ ಶರಣ್ ಕರ್ಮಜೆ ಸ್ವಪಿತಾ ಬೆಳ್ಳಿಪಾಡಿ ಸಹಕರಿಸಿದರು.