ಸುಳ್ಯ:ಕೋಟೆ ಫೌಂಡೇಶನ್ ರೈಟ್ ಟು ಲಿವ್ ಮತ್ತು ಸಿಸ್ಕೋ ಕಂಪೆನಿ ಬೆಂಗಳೂರು ಉದ್ಯೋಗಿಗಳ ಸಹಭಾಗಿತ್ವದಲ್ಲಿ ಸುಳ್ಯ ಗಾಂಧಿನಗರ ಕೆಪಿಎಸ್ನ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ, ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ, ವಿವಿಧ ಕಾರ್ಯಾಗಾರ ಶಿಬಿರ, ಉಚಿತ ನೇತ್ರ ತಪಾಸಣೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಮಾಗಮ, ಕಾರ್ಯಕ್ರಮ ಗಾಂಧಿನಗರ ಕೆಪಿಎಸ್ನಲ್ಲಿ ನಡೆಯಿತು. ಕಾರ್ಯಕ್ರಮವನ್ನು
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ನೀಡಿದ ಬ್ಯಾಗ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂಸ್ಥೆಗಳು ಕೆಪಿಎಸ್ ಶಾಲೆಯ ಕಳೆದ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡಿದ ಸ್ಕಾಲರ್ ಶಿಪ್ ವಿತರಣೆ ಮಾಡಿದರು. 680 ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು 18 ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಉಚಿತ ಕಣ್ಣಿನ ಪರೀಕ್ಷೆ ನಡೆದು ಸ್ಥಳದಲ್ಲಿಯೇ ಕನ್ನಡಕ ನೀಡುವ
ಕಾರ್ಯಕ್ರಮ ನಡೆಯಿತು. ನ.ಪಂ ಸದಸ್ಯರಾದ ಪ್ರವೀತಾ, ಶರೀಫ್ ಕಂಠಿ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ. ರಮೇಶ್, ಶಾಲಾ ಉಪ ಪ್ರಾಂಶುಪಾಲೆ ಜ್ಯೋತಿಲಕ್ಷ್ಮಿ, ಕಾರ್ಯಾಧ್ಯಕ್ಷ ಚಿದಾನಂದ ಕುದ್ಪಾಜೆ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಪದ್ಮನಾಭ, ಕೋಟೆ ಪೌಡೇಶನ್ ಸಂಸ್ಥೆಯ ಸದಸ್ಯ ಪ್ರದೀಪ್, ಸಿಸ್ಕೊ ಕಂಪನಿಯ ಉದ್ಯೋಗಿ ವೀರೇಶ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಅಬ್ದುಲ್ ಸಮದ್ ಸ್ವಾಗತಿಸಿ, ಹಿರಿಯ ಶಿಕ್ಷಕ ಚಿನ್ನಪ್ಪ ಎಂ ನಿರೂಪಿಸಿದರು. ಚಿತ್ರಕಲೆ,ವಿದ್ಯಾರ್ಥಿಗಳೊಂದಿಗೆ ಸಂವಾದ, ವಿವುಧ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.