ಕರಿಕೆ: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ, ಜಿಲ್ಲಾ ಮತ್ತು ಮಡಿಕೇರಿ ತಾಲೂಕು ಕಸಾಪ, ಭಾಗಮಂಡಲ ಹೋಬಳಿ ಕಸಾಪ ಮತ್ತು ಗ್ರಾಮ ಪಂಚಾಯ್ತಿಗಳ ಸಹಯೋಗದೊಂದಿಗೆ ಗಡಿ ಗ್ರಾಮ ಕರಿಕೆ ಎಳ್ಳುಕೊಚ್ಚಿಯ ಬೇಕಲ್ ಉಗ್ಗಪ್ಪ ನಗರದಲ್ಲಿ ನಡೆದ ಗಡಿ ಉತ್ಸವ ಸಮಾರೋಪಗೊಂಡಿತು. ಗಡಿ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಸರಕಾರವನ್ನು ಒತ್ತಾಯಿಸಿ ಗಡಿ ಉತ್ಸವದಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಕರಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್ ಅಧ್ಯಕ್ಷತೆಯಲ್ಲಿ
ಸಮಾರೋಪ ಸಮಾರಂಭ ನಡೆಯಿತು. ಕವಿ, ಸಾಹಿತಿ ಅರವಿಂದ ಚೊಕ್ಕಾಡಿ ಸಮಾರೋಪ ಭಾಷಣ ಮಾಡಿದರು. ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಗಡಿ ಉತ್ಸವ ಸ್ಚಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮಾನಾಥ್, ವಿವಿಧ ಸಮಿತಿಗಳ ಅಧ್ಯಕ್ಷರಾದ ಬೇಕಲ್ ಡಿ ದೇವರಾಜ್, ಬಿ.ಆರ್.ಬಾಲಕೃಷ್ಣ, ಕಟ್ಟಕೋಡಿ ಚಂದ್ರಶೇಖರ, ಕುದುಪಜೆ ಕಲ್ಪನಾ ಜಗದೀಶ್, ಡಾ.ಪುಂಡಲೀಕ ಲಮಾನಿ, ಬೇಕಲ್ ಡಿ ಹರಿಪ್ರಸಾದ್, ಕಟ್ಟಕೋಡಿ ದೇವದತ್ತ, ಎ.ಪಿ.ಜೀವನ್ ಕುಮಾರ್, ಕರಿಕೆ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ಆರ್.ಜಯಂತ, ಕೆ.ಪಿ.ಸುಬ್ರಹ್ಮಣ್ಯ, ಶಿಕ್ಷಕರಾದ ನಿಂಗಪ್ಪ ಹನುಮಣ್ಣನವರ್, ಅಶೋಕ್.ಕೆ.ಎಸ್, ಪ್ರಾಥಮಿಕ ಕೃಷಿಪತ್ತಿನ ಸಹಾಕರಿ ಸಂಘದ ನಿರ್ದೇಶಕರಾದ ಶ್ರೀನಿವಾಸ ಟಿ.ಆರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣಪತಿ ಪಿ.ಪಿ, ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು.’ಕರಿಕೆ ಗ್ರಾಮ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರ’, ‘ಗಡಿನಾಡಿನಲ್ಲಿ ಕನ್ನಡ, ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ’ ಎಂಬ ವಿಚಾರದಲ್ಲಿ ಎರಡು ವಿಚಾರಗೋಷ್ಠಿಗಳು ನಡೆಯಿತು. ಗೀತ ಗಾಯನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರಡಗೊಂಡಿತು.