ಸುಳ್ಯ:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆಯ ಅಂಗವಾಗಿ ಸುಳ್ಯದ ಅಟಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಳ್ಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ ಹಣ್ಣು ಹಂಪಲು ವಿತರಿಸಿದರು.ಅಟಲ್ ಚಾರಿಟೇಬಲ್ ಟ್ರಸ್ಟ್ನ
ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಕ್ಯಾಂಪ್ಕೋ ನಿರ್ದೇಶಕ ಎ.ವಿ.ತೀರ್ಥರಾಮ, ಜಿ.ಪಂ.ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ.ಕುಸುಮಾಧರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಿನಯಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಪ್ರಮುಖರಾದ ಪಿ.ಕೆ.ಉಮೇಶ್, ಮನೋಜ್ ಅಡ್ಡಂತ್ತಡ್ಕ, ಸಂತೋಷ್ ಜಾಕೆ, ಬಾಳಕೃಷ್ಣ ಕೀಲಾಡಿ, ಸುನಿಲ್ ಕೇರ್ಪಳ, ವಿಕ್ರಮ್ ಎ.ವಿ.ಅಡ್ಪಂಗಾಯ, ಚನಿಯ ಕಲ್ತಡ್ಕ, ಚಂದ್ರಶೇಖರ ಕೇರ್ಪಳ,ಸೋಮನಾಥ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
















