ಪಡ್ಡಂಬೈಲು:ದೀಪಾವಳಿ ಪ್ರಯುಕ್ತ ಪ್ರೆಂಡ್ಶಿಫ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಹಾಗೂ ಕ್ರೀಡಾಕೂಟ ಅಡ್ಕ- ಪಡ್ಡoಬೈಲ್ ಮೈದಾನದಲ್ಲಿ ನಡೆಯಿತು. ಲೋಕೇಶ್ ಪಡ್ಡoಬೈಲ್ ನೇತೃತ್ವದಲ್ಲಿ ನಡೆದ ಪಂದ್ಯಾಟದಲ್ಲಿ ಐದು ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಕ್ರಿಕೆಟ್ ಪಂದ್ಯಾಟವನ್ನು
ರೂಪಾನಂದ ಕರ್ಲಪ್ಪಾಡಿ ಉದ್ಘಾಟಿಸಿದರು. ವಿಫುಲ್ ನೀರ್ಪಾಡಿ ಮಾಲಕತ್ವದ ವಾಸ್ತವ್ಯ ವಾರಿಯರ್ಸ್ ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಸ್ಥಾನ ರಮೇಶ್ ನಾಂಗುಳಿ ಮಾಲಕತ್ವದ ರೈಸಿಂಗ್ ಸ್ಟಾರ್ಸ್ ಪಡೆದುಕೊಂಡಿತು.ಅಶೋಕ್ ಪಡ್ಡoಬೈಲ್ ಮಾಲಕತ್ವದ ಫೇರ್ ಶೂಟರ್, ಪ್ರಜ್ವಲ್ ಮಾಲಕತ್ವದ ದಿ ಬಾಯ್ಸ್ ಕರ್ಲಪ್ಪಾಡಿ, ವಿನಯ್ ನಾರಲು ಮಾಲಕತ್ವದ ಶ್ರೀವಿಷ್ಣು ಕ್ರಿಕೆಟರ್ಸ್ ತಂಡಗಳು ಭಾಗವಹಿಸಿದ್ದವು. ಮಹಿಳೆಯರಿಗೆ ಪುರುಷರಿಗೆ ಬಟ್ಟಲು ಓಟ, ಸಂಗೀತ ಕುರ್ಚಿ, ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಭಾಗವಹಿಸಿದರು. ಸಂಜೆ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಇಂದ್ರನಾಥ ಕರ್ಲಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು.ರಾಮಚಂದ್ರ ಗೌಡ ಪಡ್ಡoಬೈಲ್,ಪುರುಷೋತ್ತಮ ಕರ್ಲಪ್ಪಾಡಿ, ಗುರುದತ್ ಕಾಂತಮಂಗಲ, ರವಿರಾಜ್ ಕರ್ಲಪ್ಪಾಡಿ, ದಿವ್ಯಾ ಜಯರಾಮ್, ದಿನೇಶ್ ನಾಂಗುಳಿ ಉಪಸ್ಥಿತರಿದ್ದರು.
ನಿವೃತ್ತ ಸೈನಿಕರಾದ ಕಿರಣ್ ಕುಮಾರ್ ಮುಡೂರ್ ಮತ್ತು ಲೋಕೇಶ್ ಶಾಂತಿಮಜಲು, ಕುದ್ಪಾಜೆ ಇವರನ್ನು ಸನ್ಮಾನಿಸಲಾಯಿತು. ರಾಜೇಶ್ ಬಂಗಾರಕೋಡಿ, ರಾಜ ಕುಡೆಕಲ್ಲು, ಚಂದ್ರಕಲಾ ಕರ್ಲಪ್ಪಾಡಿ ನಿರ್ಣಾಯಕರಾಗಿ ಸಹಕರಿಸಿದರು. ಪೃಥ್ವಿ ಪಡ್ಡoಬೈಲ್ ಮತ್ತು ಪ್ರಜ್ವಲ್ ಕರ್ಲಪ್ಪಾಡಿ ಸಹಕರಿದರು.
ದಿನೇಶ್ ನಾಂಗುಳಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಬಾಲಕೃಷ್ಣ ಪಡ್ಡoಬೈಲ್ ಕಾರ್ಯಕ್ರಮ ನಿರೂಪಿಸಿದರು, ಲೋಕೇಶ್ ಪಡ್ಡoಬೈಲ್ ವಂದಿಸಿದರು.









