ಕೊಚ್ಚಿ:ಚಲನಚಿತ್ರ ನಟಿಯನ್ನು ಕಾರಿನಲ್ಲಿ ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಕೇರಳದ ಖ್ಯಾತ ಚಿತ್ರ ನಟ ದಿಲೀಪ್ನನ್ನು ದೋಷ ಮುಕ್ತಗೊಳಿಸಿ ನ್ಯಾಯಾಲಯದ ಆದೇಶ ನೀಡಿದೆ. ಇದೇ ವೇಳೆ 1ರಿಂದ ಆರರ ತನಕ ಆರುಮಂದಿ ಆರೋಪಿಗಳ ಅಪರಾಧ ಸಾಬೀತಾಗಿದ್ದು, ಇವರು
ಅಪರಾಧಿಗಳೆಂದು ಎರಣಾಕುಳಂ ಪ್ರಧಾನ ಸೆಷನ್ಸ್ ನ್ಯಾಯಾಲಯ ಘೋಷಿಸಿದೆ. ಅಪರಾಧಿಗಳಿಗೆ 12ರಂದು ಶಿಕ್ಷೆ ಘೋಷಣೆಯಾಗಲಿದೆ. ನಟ ದಿಲೀಪ್ ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿದ್ದು, ಪ್ರಕರಣದ ಸಂಚು ರೂಪಿಸಿದ್ದರು ಎಂಬ ಆರೋಪ ಅವರ ಮೇಲೆ ಇತ್ತು. ಸಾಕ್ಷ್ಯಗಳ ಕೊರತೆಯಿಂದ ಅವರನ್ನು ದೋಷಮುಕ್ತಗೊಳಿಸಲಾಯಿತು. ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಪಲ್ಸರ್ ಸುನಿ ಯಾನೆ ಸುನಿಲ್ ಎನ್.ಎಸ್, ಮಾರ್ಟಿನ್ ಆಂಟನಿ, ಬಿ. ಮಣಿಕಂಠನ್, ವಿ. ಪಿ. ವಿಜೀಶ್, ಎಚ್. ಸಲೀಂ, ಪ್ರದೀಪ್ ಎಂಬವರು ಪ್ರಕರಣದಲ್ಲಿ ಅಪರಾಧಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ.













