ಚೆನ್ನೈ:ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರೂಪುಗೊಂಡಿರುವ ‘ಫೆಂಗಲ್’ ಚಂಡಮಾರುತ ಮುಂದಿನ 12 ಗಂಟೆಗಳಲ್ಲಿ ತಮಿಳುನಾಡಿನ ಕರಾವಳಿ ಅಪ್ಪಳಿಸಲಿದೆ ಎಂದು ಇಲ್ಲಿನ ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.
ನವೆಂಬರ್ 30ರಂದು
ಈ ಚಂಡಮಾರುತ ಗಂಟೆಗೆ 60–70 ಕೀ.ಮೀ ವೇಗದಲ್ಲಿ ಕರೈಕಲ್-ಮಹಾಬಲಿಪುರಂ ದಾಟಿ ಶ್ರೀಲಂಕಾ ಕರಾವಳಿ ಅಪ್ಪಳಿಸಲಿದೆ ಎಂದು ಹವಾಮಾನ ಕೇಂದ್ರ ಹೇಳಿದೆ.
ಸದ್ಯ ಸ್ಥಿರಗೊಂಡಿರುವ ಈ ಚಂಡಮಾರುತದ ಪರಿಣಾಮ ಚೆನ್ನೈ ಕರಾವಳಿ, ಪುದುಚೇರಿ, ನಾಗಪಟ್ಟಣಂ, ಕರೈಕಲ್, ಮಹಾಬಲಿಪುರಂ ಸೇರಿದಂತೆ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿಯಲಿದೆ.
ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.