ನವದೆಹಲಿ: 7 ಹಂತದ ಲೋಕಸಭಾ ಚುನಾವಣೆ ಇಂದು ಮುಗಿದಿದ್ದು ಇದೀಗ ವಿವಿಧ ಮಾಧ್ಯಮಗಳು ನಡೆಸಿದ ಮತಗಟ್ಟೆ ಸಮೀಕ್ಷೆಗಳು ಹೊರ ಬರುತ್ತಿದೆ. ಬಹುತೇಕ ಸಮೀಕ್ಷೆಗಳಲ್ಲಿ
ಎನ್ಡಿಎ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ. ವಿವಿಧ ಸಮೀಕ್ಷೆಗಳ ಪ್ರಕಾರ
ಎನ್ಡಿಎ 350ಕ್ಕಿಂತ ಹೆಚ್ಚು ಹಾಗೂ ಇಂಡಿಯಾ ಮೈತ್ರಿಕೂಟ 125-150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ವಿವಿಧ ಮಾಧ್ಯಮ ಸಂಸ್ಥೆಗಳು ಪ್ರಕಟಿಸಿದ ಸಮೀಕ್ಷಾ ವರದಿ ಈ ಕೆಳಗಿನಂತೆ ಇದೆ..
ಇಂಡಿಯಾ ನ್ಯೂಸ್ ಡಿ-ಡೈನಾಮಿಕ್ಸ್ ಪ್ರಕಾರ
ಎನ್ಡಿಎ: 371
ಇಂಡಿಯಾ: 125
ಇತರೆ: 47 ಸ್ಥಾನ ಪಡೆಯಲಿದೆ.
ಜನ್ ಕೀ ಬಾತ್:
ಎನ್ಡಿಎ: 362-392
ಇಂಡಿಯಾ: 141-161
ಇತರೆ: 10-20
ನ್ಯೂಸ್ ನೇಷನ್
ಎನ್ಡಿಎ: 342-378
ಇಂಡಿಯಾ: 153-169
ಇತರೆ: 21-23
ರಿಪಬ್ಲಿಕ್ ಭಾರತ್-ಮ್ಯಾಟ್ರಿಝ್
ಎನ್ಡಿಎ: 353-368
ಇಂಡಿಯಾ: 118-133
ಇತರೆ: 43-48
ಲೋಕ್ ಪೋಲ್
ಎನ್ಡಿಎ: 325-335
ಇಂಡಿಯಾ: 155-165
ಇತರೆ: 48-55