ಮಂಗಳೂರು:ಪತ್ರಕರ್ತರ ಗ್ರಾಮ ವಾಸ್ತವ್ಯಕ್ಕೆ ನಿಗದಿಯಾದ ಹರಿಹರ ಕೊಲ್ಲಮೊಗ್ರ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದ್ದೇನೆ. ಈ ಸಂದರ್ಭದಲ್ಲಿ ಜನರಿಂದ ಮುಖ್ಯವಾಗಿ ಕೇಳಿ ಬಂದ ದಕ್ಷಿಣ ಕನ್ನಡ-ಕೊಡಗು ಜಿಲ್ಲೆಗಳ ಸಂಪರ್ಕ ಕಲ್ಪಿಸುವ ಗಾಳಿಬೀಡು-ಕೆಮಕಲ್ಲು- ಸುಬ್ರಹ್ಮಣ್ಯ ರಸ್ತೆ ಅಭಿವೃದ್ಧಿಗೆ ವಿಶೇಷ ಗಮನ ನೀಡಲಾಗುವುದು ಎಂದು ರಾಜ್ಯ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.ಮಂಗಳೂರಿನಲ್ಲಿ ನಡೆದ
ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾನೂನು ರೀತಿಯಲ್ಲಿ ಪರಿಶೀಲನೆ ನಡೆಸಿ ರಸ್ತೆ ಅಭಿವೃದ್ಧಿ ಪಡಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ ಧರ್ಮಸ್ಥಳ ಸೇರಿದಂತೆ ಐದು ನಗರಗಳನ್ನು ಏಕಬಳಕೆ ಪ್ಲಾಸ್ಟಿಕ್ ಮುಕ್ತ ನಗರಗಳೆಂದು ಘೋಷಿ ಸಲಾಗುವುದು. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಮುಕ್ತ ನಗರವಾಗಿ ಘೋಷಿಸಲಾಗಿದೆ ರಾಜ್ಯದ ಬೀದರ್,ಗುಲ್ಬರ್ಗ, ತುಮಕೂರು, ಮೈಸೂರು ನಗರಗಳನ್ನು ಏಕಬಳಕೆ ಪ್ಲಾಸ್ಟಿಕ್ ಮುಕ್ತ ನಗರವಾಗಿ ಘೋಷಿಸಿ ಸರಕಾರದ ಜೊತೆ ಅಲ್ಲಿನ ಗ್ರಾಮ ಪಂಚಾಯತ್, ಸ್ಥಳೀಯ ಅಡಳಿತ ಜಿಲ್ಲಾ ಡಳಿತ,ಸಂಘ ಸಂಸ್ಥೆ ಗಳ ಸಹಕಾರದಿಂದ ಇದನ್ನು ಅನುಷ್ಠಾನ ಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ರಾಜ್ಯದ ಚಾರಣ ತಾಣಗಳಲ್ಲಿ ಜನ ಜಂಗುಳಿ ತಪ್ಪಿಸಿಸಲು ಹಾಗೂ ನಿಯಂತ್ರಿಸಲು ಆನ್ ಲೈನ್ ಮೂಲಕ ನೋಂದಾಯಿಸಲು ವ್ಯವಸ್ಥೆ ಮಾಡಲಾಗುವುದು.
ಕರಾವಳಿ ನಿಯಂತ್ರಣ ವಲಯದಲ್ಲಿ ಕಾನೂನು ಬಾಹಿರ ವಾಗಿ ನಿರ್ಮಾಣ ಗೊಂಡ ಅಕ್ರಮ ಕಟ್ಟಡ ಮತ್ತು ನಿರ್ಮಾಣ ಗಳ ಬಗ್ಗೆ ಸರ್ವೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.
ಜಂಟಿ ಸರ್ವೆಗೆ ಸೂಚನೆ:-ಹಲವಾರು ಕಡೆ ಅರಣ್ಯ, ಕಂದಾಯ ಮತ್ತು ಪಟ್ಟಾ ಜಮೀನುದಾರ ಭೂಮಿಯ ಮಾಲಕತ್ವದ ಬಗ್ಗೆ ವಿವಾದವಿದೆ ಈ ಹಿನ್ನೆಲೆಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಗಳ ಜಂಟಿ ಸರ್ವೆ ನಡೆಸುವ ಬಗ್ಗೆ ತೀರ್ಮಾ ನಿಸಲಾಗಿದೆ.ಅಗತ್ಯ ವಿರುವ ರಾಜ್ಯದ ಎಲ್ಲಾ ಕಡೆ ಈ ರೀತಿಯ ಸರ್ವೆ ನಡೆಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
3 ಎಕರೆಗಳಿಗಿಂತ ಕಡಿಮೆ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ವಾಸಮಾಡುತ್ತಾ ಇರುವ ಬುಡಕಟ್ಟು ಹಾಗೂ ಅರಣ್ಯ ವಾಸಿಗಳ ಒತ್ತುವರಿಯನ್ನು ತೆರವುಗೊಳಿಸದೆ ಅವರಿಗೆ ತೊಂದರೆಯಾಗದಂತೆ ಅರಣ್ಯ ಸಂರಕ್ಷಣೆಗೆ ಒತ್ತು ನೀಡಲಾಗುವುದು .94 ಸಿ ಅರ್ಜಿ ದಾರರ ಅರ್ಜಿಗಳ ಬಗ್ಗೆ ಸೂಕ್ತ ಕ್ರಮಗಳನ್ನು ಕೈ ಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕರಾವಳಿಯ ಸಂರಕ್ಷಣೆಗೆ ಕಾಂಡ್ಲಾ ಸೇರಿದಂತೆ ನೆಡುತೋಪುಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.







