ಸುಳ್ಯ: ಸುಳ್ಯ ವಿಧಾನ ಸಭಾ ಕ್ಷೇತ್ರದ ಸುಬ್ರಹ್ಮಣ್ಯ ಅರಣ್ಯ ಉಪವಿಭಾಗ ವ್ಯಾಪ್ತಿಗೆ ಬರುವ ಸುಳ್ಯ ಮತ್ತು ಸುಬ್ರಹ್ಮಣ್ಯ ವಲಯಗಳಲ್ಲಿ ವಿವಿಧ ಕಡೆಗಳಲ್ಲಿ ಆನೆ ನಿರೋಧಕ ಕಂದಕ ನಿರ್ಮಿಸಲು 44 ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ ಎಂದು
ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.ಸುಬ್ರಹ್ಮಣ್ಯ ಅರಣ್ಯ ವಲಯದ ಉದನೆ, ಕೊಣಾಜೆ ಮುಜೂರು ಭಾಗದಲ್ಲಿ 0.70 ಕಿ.ಮೀ., ನಾಲ್ಕೂರಿನ ಸಾಲ್ದಾಡಿ ವ್ಯಾಪ್ತಿಯಲ್ಲಿ 0.70 ಕಿ.ಮೀ., ಸುಬ್ರಹ್ಮಣ್ಯ ವ್ಯಾಪ್ತಿಯ ಕಡ್ಯ ಆಕೋಟೆಕಾನ ವ್ಯಾಪ್ತಿಯಲ್ಲಿ 2 ಕಿ.ಮೀ., ಸುಳ್ಯ ವಲಯದ ಪಾಲಡ್ಕದಿಂದ ಕಲ್ಚರ್ಪೆ ಪೂಮಲೆ ಕಾಡಿನ ಪಾಲಡ್ಕದಿಂದ ಕಲ್ಚರ್ಪೆ ವರೆಗೆ 2 ಕಿ.ಮೀ. ವರೆಗೆ, ಮಂಡೆಕೋಲಿನ ಮಾವಜಿ ಭಾಗದಲ್ಲಿ 1 ಕಿ.ಮೀ. ಸೇರಿದಂತೆ ಒಟ್ಟು 6.40 ಕಿ.ಮೀ. ಕಂದಕ ನಿರ್ಮಾಣಕ್ಕೆ 44, 29, 056 ರೂ. ಬಿಡುಗಡೆ ಆಗಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.









