ಹೈದರಾಬಾದ್: ಮೊದಲ ಟೆಸ್ಟ್ನಲ್ಲ ಇಂಗ್ಲೆಂಡ್ ತಂಡಕ್ಕೆ 28 ರನ್ಗಳ ಗೆಲುವು. ಇದರೊಂದಿಗೆ ಪ್ರವಾಸಿ ಬಳಗವು ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು.ಪಂದ್ಯದ ನಾಲ್ಕನೇ ದಿನವಾದ ಭಾನುವಾರ 231 ರನ್ಗಳ ಜಯದ ಗುರಿ ಬೆನ್ನಟ್ಟಿದ್ದ ಭಾರತ ತಂಡವು ಟಾಮ್ ಹಾರ್ಟ್ಲಿ (62ಕ್ಕೆ7) ದಾಳಿಗೆ ಕುಸಿದು 69.2 ಓವರ್ಗಳಲ್ಲಿ
202 ರನ್ ಗಳಿಸಿ ಆಲೌಟ್ ಆಯಿತು. ರೋಹಿತ್ ಶರ್ಮಾ (39; 58ಎ, 4X7), ಕೆ.ಎಲ್. ರಾಹುಲ್ (22; 48ಎ, 4X3), ಶ್ರೀಕರ್ ಭರತ್ (28; 59ಎ), ಆರ್. ಅಶ್ವಿನ್ (28; 84ಎ) ಹಾಗೂ ಕಟ್ಟಕಡೆಯ ಬ್ಯಾಟರ್ ಮೊಹಮ್ಮದ್ ಸಿರಾಜ್ (12; 20ಎ) ಅವರ ಹೋರಾಟಕ್ಕೆ ಫಲ ಸಿಗಲಿಲ್ಲ. ಮೂರನೇ ಕ್ರಮಾಂಕದ ಬ್ಯಾಟರ್ ಶುಭಮನ್ ಗಿಲ್ ಸೊನ್ನೆ ಸುತ್ತಿದರು. ಮೊದಲ ಇನಿಂಗ್ಸ್ನಲ್ಲಿ ಮಿಂಚಿದ್ದ ರವೀಂದ್ರ ಜಡೇಜ 2 ರನ್ ಗಳಿಸಿ ರನೌಟ್ ಆದರು. ಅಲ್ಲದೇ ಯಶಸ್ವಿ ಜೈಸ್ವಾಲ್ ಹಾಗೂ ಶ್ರೇಯಸ್ ಅಯ್ಯರ್ ಅವರು ದೀರ್ಘ ಇನಿಂಗ್ಸ್ ಆಡುವಲ್ಲಿ ವಿಫಲರಾದರು.ತಂಡವು 119 ರನ್ಗಳಿಗೆ ಏಳು ವಿಕೆಟ್ ಕಳೆದುಕೊಂಡಿದ್ದಾಗ, ಭರತ್ ಮತ್ತು ಅಶ್ವಿನ್ ಅವರು ಜೊತೆಯಾಟದಲ್ಲಿ 57 ರನ್ ಸೇರಿಸಿ ಜಯದ ಭರವಸೆ ಮೂಡಿಸಿದ್ದರು.
2013ರಿಂದ ಇಲ್ಲಿಯವರೆಗೆ ಭಾರತ ತಂಡವು ತವರಿನಲ್ಲಿ ಸೋತ ನಾಲ್ಕನೇ ಟೆಸ್ಟ್ ಇದಾಗಿದೆ.ಮೊದಲ ಇನಿಂಗ್ಸ್ನಲ್ಲಿ ಉತ್ತಮ ಮುನ್ನಡೆ ಗಳಿಸಿದ್ದ ಭಾರತ ತಂಡದ ಕೈಯಿಂದ ಗೆಲುವನ್ನು ಕಸಿದುಕೊಂಡವರು ಬ್ಯಾಟರ್ ಒಲಿ ಪೋಪ್ 196, ಹಾರ್ಟ್ಲಿ (34; 52ಎ, 4X4) ಅವರೊಂದಿಗೆ ಪೋಪ್ ಎಂಟನೇ ವಿಕೆಟ್ ಜೊತೆಯಾಟದಲ್ಲಿ 80 ರನ್ ಸೇರಿಸಿದರು. ಸ್ಕೋರ್:
ಇಂಗ್ಲೆಂಡ್: 64.3 ಓವರ್ಗಳಲ್ಲಿ 246. 102.1 ಓವರ್ಗಳಲ್ಲಿ 420::ಭಾರತ: 121 ಓವರ್ಗಳಲ್ಲಿ 436, 69.2 ಓವರ್ಗಳಲ್ಲಿ 202














