ಎನೆಕಲ್: ರೈತ ಯುವಕ ಮಂಡಲ ಏನೆಕಲ್ ಇದರ ಆಶ್ರಯದಲ್ಲಿ ಏನೇಕಲ್ಲಿನ ಗ್ರಾಮಸ್ಥರಿಗೆ ದೀಪಾವಳಿ ಕ್ರೀಡಾಕೂಟ ನಡೆಯಿತು. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ತಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಕ್ರೀಡಾಕೂಟ ಉದ್ಘಾಟಿಸಿದರು. ರೈತ ಯುವಕ ಮಂಡಲದ ಅಧ್ಯಕ್ಷ ಮನುದೇವ್ ಪರಮಲೆ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ವಿಟಿಯು ಪ್ರಾದೇಶಿಕ ನಿರ್ದೇಶಕರಾದ

ಡಾ. ಶಿವಕುಮಾರ್ ಹೊಸೊಳಿಕೆ, ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯ ಅಶೋಕ್ ನೆಕ್ರಾಜೆ, ಸುಬ್ರಹ್ಮಣ್ಯ ಎಸ್ಐ ಕಾರ್ತಿಕ್, ಏನೆಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ವೇದಾವತಿ ಕೊಟಿಗೌಡನಮನೆ ಭಾಗವಹಿಸಿದ್ದರು.ನಂತರ ಸರಕಾರಿ ಉದ್ಯೋಗದಿಂದ ನಿವೃತರಾದ ಹಿರಿಯರನ್ನು ಹಾಗೂ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಗರಿಷ್ಟ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಡುವೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಶುಭ ಹಾರೈಸಿದರು.
ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪಂಚಾಯತ್ ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಸದಸ್ಯರಾದ ಮೋಹನ್ ಕೋಟಿಗೌಡನಮನೆ, ಜಯಂತಿ ಪರಮಲೆ, ಭವ್ಯ ಜೇನುಕೋಡಿ, ಶಿವರಾಮ್ ನೆಕ್ರಾಜೆ ಬಹುಮಾನ ವಿತರಿಸಿದರು.ವೇದಿಕೆಯಲ್ಲಿ ಏನೆಕಲ್ ರೈತ ಯುವಕ ಮಂಡಲದ ಕಟ್ಟಡ ರಚನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ನಿವೃತರಾದ ಡಾ. ಭಾನುಮತಿ ಹರಿಶ್ಚಂದ್ರ ಚಿದ್ಗಲ್, ಲೋಕೇಶ್ ಚಿದ್ಗಲ್,ಶೇಷಪ್ಪ ಮಾದನಮನೆ,ಹೊನ್ನಪ್ಪ ಕಟ್ಟ, ಉಮೇಶ್ ಹೊಸೊಳಿಕೆ, ಬಚ್ಚನಾಯಕ ದೈವಸ್ಥಾನದ ಪ್ರಧಾನ ಪೂಜಾರಿಗಳಾದ ರಾಧಾಕೃಷ್ಣ ಪೂಜಾರಿಮನೆ, ಊರು ಗೌಡರುಗಳು, ಯುವಕ ಮಂಡಲದ ಕಾರ್ಯದರ್ಶಿ ಸಾತ್ವಿಕ್ ಚಿದ್ಗಲ್ ಉಪಸ್ಥಿತರಿದ್ದರು.ರಕ್ಷಿತ್ ಪರಮಲೆ ಸ್ವಾಗತಿಸಿ, ವಿಜಯ ಕುಮಾರ್ ಅಮೈ ನಿರೂಪಿಸಿದರು. ಸಾತ್ವಿಕ್ ಚಿದ್ಗಲ್ ವಂದಿಸಿದರು.









