ಏಣಾವರ:ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಏಣಾವರ ವಯನಾಟ್ ಕುಲವನ್ ದೈವಸ್ಥಾನದ ಜೀರ್ಣೋದ್ದಾರ ಕಾರ್ಯ ಊರ ಜನರ ಪಾಲ್ಗೊಲ್ಲುವಿಕೆಯಲ್ಲಿ ನಡೆಯುತ್ತಿದ್ದು ಪ್ರಗತಿಯ ಕಾಮಗಾರಿ ಬಗ್ಗೆ ಚರ್ಚಿಸಲು ಜೀರ್ಣೋದ್ಧಾರ ಸಮಿತಿ ಸಭೆ ನಡೆಯಿತು.ಸಭೆಯಲ್ಲಿ
ನಿವೃತ್ತ ಶಿಕ್ಷಕ ವೇಣುಗೋಪಾಲ ಕೊಯಿಂಗಾಜೆ, ಜೆ ಕೆ ರೈ, ನಾರಾಯಣ ಬಾರ್ಪಣೆ, ಪವಿತ್ರನ್ ಗುಂಡ್ಯ,ಸತೀಶ್ ನೂಜಾಲು, ದೇವಿಪ್ರಸಾದ್ ಬಾಳೆಕೊಚ್ಚಿ ,ಚಂದ್ರಶೇಖರ ಏಣಾವರ,ಶ್ರೀಧರ್ ಏಣಾವರ,ತಿಮ್ಮಪ್ಪ ಬಾಳೆಹಿತ್ಲು,ಸೋಮಶೇಖರ್ ನಡುಮನೆ,ಪುರುಷೋತ್ತಮ ನಡುಮನೆ,ರಾಜೇಶ್ ನಡುಮನೆ,ಪದ್ಮನಾಭ ನಡುಮನೆ, ಸತ್ಯಪ್ರಸಾದ್ ಕೆ.ಎಸ್,ಮಾಲಿಂಗ ಏಣಾವರ ಪಾಲ್ಗೊಂಡಿದ್ದರು. ಮರಳು ತರುವಲ್ಲಿ ಶ್ರಮದಾನದಲ್ಲಿ ಪಾಲ್ಗೊಂಡವರಿಗೆ ಕೃತಜ್ಞತೆ ಅರ್ಪಿಸಿ ದೈವಸ್ಥಾನಕ್ಕೆ ನೆರವು ಘೋಷಿಸಿದ ಭಕ್ತಾದಿಗಳು ಆದಷ್ಟು ಬೇಗ ಕ್ಷೇತ್ರಕ್ಕೆ ಒಪ್ಪಿಸಿ ಸಹಕಾರ ನೀಡಬೇಕೆಂದು ವಿನಂತಿಸಲಾಯಿತು.ದೇವಸ್ಥಾನಕ್ಕೆ ಬೇಕಾಗುವ ಕಲ್ಲು, ಮರ ಮತ್ತಿತರ ವಿಚಾರ ಚರ್ಚಿಸಲಾಯಿತು. ಸತ್ಯಪ್ರಸಾದ್ ಸ್ವಾಗತಿಸಿ ವೇಣುಗೋಪಾಲ ಕೊಯಿಂಗಾಜೆ ವಂದಿಸಿದರು.









