ಎಲಿಮಲೆ:ನುಸ್ರತುಲ್ ಇಸ್ಲಾಂ ಎಸೋಸಿಯೇಷನ್ ರಿ. ಎಲಿಮಲೆ ಇದರ 42ನೇ ವಾರ್ಷಿಕ ಸಮಾರಂಭ ಹಾಗೂ ಇಕ್ರಾಮುಸ್ಸುನ್ನ ೨ನೇ ಬಿರುದುದಾನ ಮಹಾಸಮ್ಮೇಳದ ಅಂಗವಾಗಿ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಪುತ್ತೂರು ಇದರ ಸಹಯೋಗದೊಂದಿಗೆ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಜ.30 ರಂದು ಎಲಿಮಲೆ ಪೇಟೆಯಲ್ಲಿ ನಡೆಯಲಿದೆ.ಶಿಬಿರವನ್ನು
ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಉಧ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ನೆಲ್ಲೂರು ಕೇಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕುಮಾರ್, ಮೂಸಕುಂಞಿ ಪೈಂಬಚ್ಚಾಲ್, ವಿಷ್ಣು ಭಟ್ ಮೂಲೆತೋಟ, ವಂದನಾ ಹೊಸತೋಟ, ಹರೀಶ್ ಬಂಟ್ವಾಳ್, ದುರ್ಗಕುಮಾರ್ ನಾಯರ್ಕೆರೆ, ಮೋನಿಷಾ ಜಿ.ಎಸ್, ಪುರುಷೋತ್ತಮ ಸುಳ್ಳಿ, ಜಯಾನಂದ ಪಟ್ಟಿೆ, ರಾಜೇಶ್ಅಂಬೆಕಲ್ಲು, ಬಿ ಎ ಹರಿಪ್ರಸಾದ್, ಕುಲದೀಪ್ ಹರ್ಲಡ್ಕ, ಹಿಮಕರ ಪರ್ಲಡಿ, ಹಾರಿಸ್ ಪಳ್ಳಿಕ್ಕಲ್, ಪ್ರವಿಣ್ ಮಾವಿನಕಟ್ಟೆ ಮುಂತಾದವರು ಉಪಸ್ಥಿತರಿರುವರು.ಸಾರ್ವಜನಿಕರು ಈ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ಸಂಘಟಕರು ತಿಳಿಸಿದ್ದಾರೆ.





