ಮಂಡೆಕೋಲು:ಮಂಡೆಕೋಲು ಕನ್ಯಾನದಲ್ಲಿ ತಾಯಿ ಆನೆಯಿಂದ ಬೇರ್ಪಟ್ಟು ಒಂಟಿಯಾದ ಮರಿ ಆನೆಯನ್ನು ರಕ್ಷಣೆ ಮಾಡಿದ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಆನೆ ಹಿಂಡಿನ ಜೊತೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಮರಿ ಆನೆ ಹಿಂಡಿನ ಜೊತೆ ಸೇರಿದೆ ಎಂದು ಅರಣ್ಯ ಇಲಾಖೆ ದೃಢಪಡಿಸಿದೆ. ಶುಕ್ರವಾರ ಸಂಜೆಯ ವೇಳೆಗೆ ಅರಣ್ಯದಲ್ಲಿ ಆನೆ ಹಿಂಡನ್ನು ಪತ್ತೆ ಹಚ್ಚಲಾಗಿದ್ದು ಆನೆ ಮರಿಯನ್ನು ಹಿಂಡಿನ ಸಮೀಪ
ಬಿಡಲಾಗಿತ್ತು. ಆನೆ ಹಿಂಡು ಮರಿಯನ್ನು ಗುಂಪಿಗೆ ಸೇರಿಸುತ್ತವೆಯಾ ಅಥವಾ ಮರಿ ಹಿಂತಿರುಗಿ ಬರಯತ್ತದಾ ಅಂತ ಕಳೆದ ಒಂದು ದಿನದಿಂದ ನಿರೀಕ್ಷಿಸಲಾಗಿದೆ. ಆನೆ ಮರಿ ಹಿಂತುರುಗಿ ಬಂದಿಲ್ಲ ಮತ್ತು ಆನೆ ಮರಿ ಪತ್ತೆಯಾಗಿಲ್ಲ. ಮರಿಯನ್ನು ಆನೆ ಹಿಂಡು ಸೇರಿಸಿಕೊಂಡಿದೆ ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ. ಮಂಡೆಕೋಲು ಗ್ರಾಮದ ಕನ್ಯಾನ ಶಾಲೆಯ ಬಳಿಯಲ್ಲಿ ಶುಕ್ರವಾರ ಬೆಳಗ್ಗೆ ಹಿಂಡಿನಿಂದ ಬೇರ್ಪಟ್ಟು ಒಂಟಿಯಾದ ಮರಿಯಾನೆ ಕಂಡು ಬಂದಿತ್ತು. ಅಂದಾಜು 3 ತಿಂಗಳು ಪ್ರಾಯದ ಮರಿಯಾನೆಯನ್ನು
ಅರಣ್ಯ ಇಲಾಖೆ ಮರಿ ಆನೆಯನ್ನು ಆರೈಕೆ ಮಾಡಿ
ತಾಯಿ ಆನೆಯೊಂದಿಗೆ ಸೇರಿಸಲು ಕಾರ್ಯಾಚರಣೆ ನಡೆಸಿ ಆನೆ ಮರಿಯನ್ನು ಆನೆ ಹಿಂಡಿನ ಸಮೀಪ ಬಿಡಲಾಗಿತ್ತು.





