ಸುಳ್ಯ: ಮನೆಯ ಕಂಪೌಂಡ್ ಒಳಗೆ ನುಗ್ಗಿ ಕಾಡಾನೆಗಳು ಕೃಷಿ ಹಾನಿ ಮಾಡಿದ ಘಟನೆ ಪೆರಾಜೆ ಸಮೀಪದ ಸಿರಿಕುರಲ್ ನಗರದಲ್ಲಿ ನಡೆದಿದೆ. ಸಿರಿಕುರಲ್ ನಗರದಲ್ಲಿರುವ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಗೋಕುಲ್ದಾಸ್ ಅವರ ಸಿರಿಕುರಲ್ ನಗರದಲ್ಲಿರುವ
ಮನೆಯ ಕಂಪೌಂಡ್ನ ಒಳಗೆ ನುಗ್ಗಿದ ಕಾಡಾನೆಗಳ ಹಿಂಡು 3 ತೆಂಗಿನ ಮರಗಳು ಹಾಗೂ ತೆಂಗಿನ ಗಿಡಗಳನ್ನು ನಾಶ ಮಾಡಿದೆ. ಕಂಪೌಂಡ್ಗೂ ಹಾನಿ ಮಾಡಿದೆ. ಅಲ್ಲದೆ ಸಮೀಪದ ಕೃಷಿಕರ ಕೃಷಿ ಹಾನಿ ಮಾಡಿದೆ. ಬುಧವಾರ ಬೆಳಗ್ಗಿನ ಜಾವ ಆನೆಗಳ ಹಿಂಡು ಸಿರಿಕುರಲ್ ಭಾಗದಲ್ಲಿ ವ್ಯಾಪಕವಾಗಿ ಕೃಷಿ ಹಾನಿ ಮಾಡಿದೆ.












