ಸುಳ್ಯ:ಸುಳ್ಯ ತಾಲೂಕು ಕಛೇರಿಯಲ್ಲಿ ಇ-ಆಫೀಸ್ ತಂತ್ರಾಂಶವನ್ನು ತಾಲೂಕು ಕಛೇರಿ ಸಭಾಂಗಣದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಸರ್ಕಾರ ಯೋಜನೆಗಳು ಯಾವುದೇ ಅಡೆತಡೆ ಇಲ್ಲದೆ
ನೇರವಾಗಿ ಜನ ಸಾಮಾನ್ಯರಿಗೆ ತಲುಪಬೇಕು. ಡಿಜಿಟಲ್ ಸೇವೆಯಿಂದ ಸುಲಭವಾಗಿ ಅರ್ಜಿಗಳು ಸಲ್ಲಿಸಲು ಸಹಾಯವಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಳ್ಯ ತಹಶೀಲ್ದಾರರಾದ ಮಂಜುನಾಥ ಎಂ, ಮಹದೇವಸ್ವಾಮಿ, ಮಂಜುನಾಥ ಕೆ ಎಮ್, ಚನಿಯ ಕಲ್ತಡ್ಕ, ಸುಬೋಧ್ ಶೆಟ್ಟಿ ಮೇನಾಲ ಹಾಗೂ ತಾಲೂಕು ಕಛೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.









