ಬೆಂಗಳೂರು: ರಜತ್ ಪಾಟೀದಾರ್ ನೇತೃತ್ವದ ಕೇಂದ್ರ ವಲಯ ತಂಡ ದುಲೀಪ್ ಟ್ರೋಫಿಯ ಗೆದ್ದುಕೊಂಡಿದೆ. ಕೇಂದ್ರ ವಲಯ ತಂಡದಕ್ಷಿಣ ವಲಯ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿ ದುಲೀಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಗೆಲ್ಲಲು ಕೇವಲ 65 ರನ್ಗಳ ಗುರಿ ಪಡೆದಿದ್ದ ಕೇಂದ್ರ ವಲಯ 4 ವಿಕೆಟ್ಗಳಿಂದ ಕಳೆದುಕೊಂಡು ಪಂದ್ಯದ ಕೊನೆಯ ದಿನದಂದು
ಜಯದ ನಗೆಬೀರಿತು. ಕೇಂದ್ರ ವಲಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಯಶ್ ರಾಥೋಡ್ 194 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ನಾಯಕ ರಜತ್ ಪಟಿದಾರ್ ಮತ್ತೊಮ್ಮೆ ತಮ್ಮ ನಾಯಕತ್ವದ ಶಕ್ತಿಯನ್ನು ತೋರಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ವಲಯ ತಂಡವು ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 149 ರನ್ಗಳಿಗೆ ಆಲೌಟ್ ಆಯಿತು. ಕೇಂದ್ರ ವಲಯ ಪರ ಬೌಲಿಂಗ್ನಲ್ಲಿ ಮಿಂಚಿದ
ಸ್ಪಿನ್ನರ್ ಸರಾಂಶ್ ಜೈನ್ 5 ವಿಕೆಟ್ಗಳನ್ನು ಪಡೆದರೆ, ಕುಮಾರ್ ಕಾರ್ತಿಕೇಯ 4 ವಿಕೆಟ್ಗಳನ್ನು ಕಬಳಿಸಿತ್ತು. ಬಳಿಕ ಕೇಂದ್ರ ವಲಯದ ಬ್ಯಾಟ್ಸ್ಮನ್ಗಳು ತಮ್ಮ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ 511 ರನ್ಗಳಿಗೆ ಕೊಂಡೊಯ್ದರು. ನಾಯಕ ರಜತ್ ಪಟಿದಾರ್ 101 ರನ್ ಗಳಿಸಿದರೆ, ಯಶ್ ರಾಥೋಡ್ 194 ರನ್ ಬಾರಿಸಿದರು. ಉಳಿದಂತೆ ಸರಾಂಶ್ ಜೈನ್ 69 ರನ್, ದಾನಿಶ್ ಮಾಲೆವಾರ್ 53 ರನ್ಗಳ ಇನ್ನಿಂಗ್ಸ್ ಆಡಿದರು. ಎರಡನೇ ಇನ್ನಿಂಗ್ಸ್ನಲ್ಲಿ ಪುನರಾಗಮನಕ್ಕಾಗಿ ಹೋರಾಟ ನೀಡಿದ ದಕ್ಷಿಣ ವಲಯ 426 ರನ್ ಕಲೆಹಾಕಿತು. ತಂಡದ ಪರ ಅಂಕಿತ್ ಶರ್ಮಾ 99 ರನ್ ಬಾರಿಸಿದರೆ, ಆಂಡ್ರೆ ಸಿದ್ಧಾರ್ಥ್ 84 ರನ್ ಬಾರಿಸಿದರು.





