ಸುಳ್ಯ:2025-26 ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ಹನಿ ನೀರಾವರಿ ಅಳವಡಿಕೆಗೆ ಪ್ರತೀ ಫಲಾನುಭವಿಗೆ ಗರಿಷ್ಠ 5.00 ಹೆಕ್ಟೆರ್ ಪ್ರದೇಶದವರೆಗೆ ಸಹಾಯಧನಕ್ಕೆ ಅರ್ಜಿ ನೀಡಬಹುದು. ಕಾಫಿ, ಟೀ ಮತ್ತು ರಬ್ಬರ್ ಬೆಳೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಲಭ್ಯವಿರುತ್ತದೆ. ರೈತರಿಗೆ
ಶೇ.90 ರಂತೆ 2.00 ಹೆಕ್ಟೇರ್ ವರೆಗೆ ಹಾಗೂ 2.00 ಹೆ ನಿಂದ 5.00 ಹೆಕ್ಟೇರ್ ವರೆಗೆ ರೈತರಿಗೆ ಶೇ. 45ರ ಸಹಾಯಧನವಿರುತ್ತದೆ. ತೋಟಗಾರಿಕೆ ಬೆಳೆ ಹಾಗೂ ನೀರಾವರಿ ಮೂಲವನ್ನು ಹೊಂದಿರುವ ಆಸಕ್ತ ರೈತರು ನಿಗದಿತ ನಮೂನೆಯಲ್ಲಿ FID ಸಂಖ್ಯೆಯೊಂದಿಗೆ ಈ ಕಚೇರಿಗೆ ಅರ್ಜಿ ಸಲ್ಲಿಸಬಹುದು. (SC / ST ರೈತರು RD ಸಂಖ್ಯೆಯಿರುವ ಜಾತಿ ಪ್ರಮಾಣ ಪತ್ರ ನೀಡುವುದು)
2025-26 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪರಿಶಿಷ್ಟ ಜಾತಿ ರೈತರಿಗೆ 546 ಕೆ.ಜಿ. , ಪರಿಶಿಷ್ಟ ಪಂಗಡ ರೈತರಿಗೆ 544 ಕೆ.ಜಿ. ಹಾಗೂ ಸಾಮಾನ್ಯ ರೈತರಿಗೆ 658 ಕೆ.ಜಿ Pepper Special ಲಭ್ಯವಿದ್ದು, ಆಸಕ್ತ ರೈತರು ನಿಗದಿತ ಅರ್ಜಿಯೊಂದಿಗೆ RTC (ಜಂಟಿಯಾಗಿದ್ದಲ್ಲಿ GPA ಪ್ರತಿ), ಆಧಾರ್, ಪಾಸ್ ಪುಸ್ತಕ ಜೆರಾಕ್ಸ್, SC / ST ರೈತರು ಜಾತಿ ಪ್ರಮಾಣ ಪತ್ರ ಸಲ್ಲಿಸಿ, ಪಡೆದುಕೊಳ್ಳಬಹುದು.
ಅಡಿಕೆ ಬೆಳೆಗೆ ಬಾದಿಸುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಬಳಸುವ ರೋಗ ನಾಶಕಗಳಾದ ಪ್ರೋಪಿಕೋನಜಾಲ್, ಟ್ಯುಬಿಕೊನಾಜಾಲ್, ಪ್ರೋಪಿನೆಬ್, ಕಾರ್ಬನ್ ಡೈಜಿಮ್ + ಮ್ಯಾಂಕೇಜೆಬ್, ಕಾಪರ್ ಸಲ್ಪೇಟ್ (ಮೈಲು ತುತ್ತು) ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇಕಡಾ 30 ರಂತೆ ಪ್ರತೀ ಎಕರೆಗೆ ರೂ. 600 ಸಹಾಯಧನ ಲಭ್ಯವಿದೆ. ಪ್ರತಿ ರೈತರಿಗೆ 5 ಎಕರೆಗೆ ಗರಿಷ್ಟ 3000 ಸಹಾಯಧನ ನೀಡಲಾಗುವುದು. ರೈತರು ಅರ್ಜಿಯೊಂದಿಗೆ ಅಧಿಕೃತ ಕೀಟನಾಶಕ ಮಾರಾಟ ಪರವಾನಿಗೆ ಇರುವ ಮಾರಾಟಗಾರರಿಂದ ಮೇಲಿನ ಸಸ್ಯ ಸಂರಕ್ಷಣಾ ಔಷಧಿ ಖರೀದಿಸಿ, ಜಿ.ಎಸ್.ಟಿ. ಬಿಲ್ಲು, ಪಹಣಿ ಪತ್ರ (RTC) ಆರ್.ಟಿ.ಸಿ. ಜಂಟಿ ಖಾತೆ ಹೊಂದಿದ್ದಲ್ಲಿ, ಉಳಿಕೆದಾರರಿಂದ ಒಪ್ಪಿಗೆ / ಜಿ.ಪಿ.ಎ. ಪತ್ರ , ಆಧಾರ್, ಜಾತಿ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ತೋಟಗಾರಿಕೆ ಇಲಾಖೆಗೆ ಸಲ್ಲಿಸಬಹುದು ಎಂದು ತೋಟಗಾರಿಕಾ ಇಲಾಖೆಯ ಪ್ರಕಟಣೆ ತಿಳಿಸಿದೆ.












