ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭರ್ಜರಿ ಗೆಲುವು ಸಾಧಿಸಿದ್ದಾರೆ. 1,49,208 ಮತಗಳ ಅಂತರದಲ್ಲಿ ಚೌಟ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಚೌಟ ಬಹುಮತ ಪಡೆದರೆ, ಪದ್ಮರಾಜ್ ಆರ್ ಪೂಜಾರಿ ಅವರಿಗೆ ಒಂದು ಕ್ಷೇತ್ರದಲ್ಲಿ ಮಾತ್ರ ಬಹುಮತ ಪಡೆಯಲು ಸಾಧ್ಯವಾಗಿದೆ. ಜಿಲ್ಲೆಯ ವಿವಿಧ
ವಿಧಾನ ಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಪಡೆದ ಮತಗಳು ಹಾಗೂ ಬಹುಮತದ ವಿವರ ಇಲ್ಲಿದೆ.
ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬ್ರಿಜೇಶ್ ಚೌಟ- 95,531 ಮತ, ಪದ್ಮರಾಜ್ 71,187 ಮತ ಪಡೆದರು. ಚೌಟ 24,344 ಬಹುಮತ ಪಡೆದರು.
ಮಂಗಳೂರು ಉತ್ತರ – ಚೌಟ 1,08,137 ಮತ ಪಡೆದರೆ ಪದ್ಮರಾಜ್ 76,716 ಮತ. ಚೌಟರಿಗೆ 31,421 ಮತಗಳ ಬಹುಮತ
ಮಂಗಳೂರು ಕ್ಷೇತ್ರದಲ್ಲಿ – ಚೌಟ 64870 ಪಡೆದರೆ, ಪದ್ಮರಾಜ್ 97,933 ಮತ ಪಡೆದರು. ಪದ್ಮರಾಜ್ 33,063 ಮತಗಳ ಬಹುಮತ ಪಡೆದರು.
ಮೂಡುಬಿದಿರೆ – ಚೌಟ 92,496 ಮತ ಪಡೆದರೆ, ಪದ್ಮರಾಜ್ 64,308 ಮತ ಪಡೆದರು. ಚೌಟ 28,188 ಮತಗಳ ಲೀಡ್ ಪಡೆದರು.
ಬೆಳ್ತಂಗಡಿ – ಚೌಟರಿಗೆ 1,01,408 ಮತ, ಪದ್ಮರಾಜ್ 78,101 ಮತ. ಚೌಟ 23,307 ಮತಗಳ ಲೀಡ್ ಪಡೆದರು.
ಬಂಟ್ವಾಳ – ಚೌಟ 94,679 ಮತ, ಪದ್ಮರಾಜ್ 88,686 ಮತ. ಚೌಟ 5,993 ಮತಗಳ ಬಹುಮತ.
ಪುತ್ತೂರು -ಚೌಟ 1,00,247 ಮತ, ಪದ್ಮರಾಜ್ 71,557 ಮತ, ಚೌಟ 28,690 ಮತಗಳ ಬಹುಮತ.
ಸುಳ್ಯ. – ಬ್ರಿಜೇಶ್ ಚೌಟ 1,02,762 ಮತ, ಪದ್ಮರಾಜ್ – 63615 ಮತ. ಚೌಟ 39,147 ಮತಗಳ ಬಹುಮತ ಪಡೆದರು.