ಮಂಗಳೂರು:ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಪ್ರಾದೇಶಿಕ ಕಛೇರಿ ಉದ್ಘಾಟನೆ ಮತ್ತು ತೆಂಗು ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮ;ನ.16 ರಂದು ಪೂರ್ವಾಹ್ನ 9.45 ರಿಂದ ಮಂಗಳೂರಿನ ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಬಳಿ ನಡೆಯಲಿದೆ ಎಂದು ದಕ್ಷಿಣ ಕನ್ಬಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್.ಕೆ. ತಿಳಿಸಿದ್ದಾರೆ. ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಡಾ ಧರ್ಮಪಾಲನಾಥ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸುವರು. ಸ್ಪೀಕರ್ ಯು. ಟಿ.. ಖಾದರ್ ಕಚೇರಿಯ ಉದ್ಘಾಟನೆಯನ್ನು ನೆರವೇರಿಸುವರು. ಅತಿಥಿಗಳಾಗಿ

ಶಾಸಕರಾದ ಡಿ ವೇದವ್ಯಾಸ ಕಾಮತ್, ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಐ.ಸಿ.ಎ.ಆರ್ -ಸಿ.ಪಿ.ಸಿ.ಆರ್.ಐ, ಕಾಸರಗೋಡು ಇದರ ನಿರ್ದೇಶಕರಾದ ಡಾ ಹಬ್ಬಾರ್ ಕೆ ಬಿ, ಉಪ ನಿರ್ದೇಶಕರು ತೋಟಗಾರಿಕಾ ಇಲಾಖೆಯ ನಿರ್ದೇಶಕ ಹೆಚ್.ಆರ್.ನಾಯ್ಕ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕೆಂಪೇ ಗೌಡ ಹೆಚ್, ಕೇಶವ ಮರೋಳಿ, ಸಂಗೀತಾ ಎಸ್ ಕರ್ತಾ, ಡಾ. ರಮೇಶ್, ರವಿಕಿರಣ್ ಪುಣಚ, ಜೀವನ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ತೆಂಗು ಬೆಳೆಗಾರರಿಗೆ ಸೂಕ್ತ ಪ್ರಯೋಜನಗಳನ್ನು ಒದಗಿಸುವ ಸ್ಪಷ್ಟ ಉದ್ದೇಶದೊಂದಿಗೆ, ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ರೈತ ಉತ್ಪಾದಕರ ಸಂಸ್ಥೆ 2013ರ ಕಂಪೆನಿಯ ಕಾಯಿದೆ ಅಡಿಯಲ್ಲಿ ಆಗಸ್ಟ್ 5, 2021 ರಲ್ಲಿ ಸ್ನಾಪಿಸಲಾಯಿತು. ಪ್ರಾಥಮಿಕ ಆದ್ಯತೆ ಸುಧಾರಿತ ಕೃಷಿ ನಿರ್ವಹಣಾ ಪದ್ಧತಿಗಳ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದು.ಸುಸ್ಮಿತರ ತಂಗು ಬೆಳೆ ಮತ್ತು ಕೃಷಿ ಪರಿಸರ ವ್ಯವಸ್ಥೆಗಳನ್ನು ಉತ್ತೇಜಿಸುವುದು. ಕರ್ನಾಟಕದಾದ್ಯಂತ 15,000ಕ್ಕಿಂತಲೂ ಹೆಚ್ಚು ತೆಂಗಿನ ಮರಗಳು ಮತ್ತು 332+ಗ್ರಾಮಗಳನ್ನು ಒಳಗೊಂಡಿದೆ. ಪಸ್ತುತ 10ಶಾಖೆಗಳನ್ನು ಹೊಂದಿದ್ದು, ಪ್ರತಿ ತಾಲೂಕಿನಲ್ಲಿಯೂ ಶಾಖೆಯನ್ನು ಆರಂಭಿಸುವ ಗುರಿಯನ್ನು ಹೊಂದಿದೆ. 11ನೇ ಶಾಖೆ ಹಾಗೂ ಪ್ರಾದೇಶಿಕ ಕಚೇರಿ ಮಂಗಳೂರು ಮರೋಳಿಯಲ್ಲಿ ಉದ್ಘಾಟನೆಗೊಳ್ಳಲಿದೆ. ತೆಂಗು ಬೆಳೆಗಾರರಿಗೆ ಸಮರ್ಪಕ ಸೌಲಭ್ಯವನ್ನು ಒದಗಿಸುವ ಉದ್ದೇಶದೊಂದಿಗೆ ಈ ಸಂಸ್ಥೆಯು ಪಂಚಕಲ್ಯ ಯೋಜನೆಯನ್ನು ಜಾರಿಗೊಳಿಸಿದೆ.ಪಂಚಕಲ್ಪ ಯೋಜನೆಗಳಲ್ಲಿ ಒಂದಾಗಿರುವ ಕಲ್ಪವೃಕ್ಷಯೋಜನೆಯ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಕಲ್ಪವೃಕ್ಷ ಯೋಜನೆ: ಈ ಯೋಜನೆಯಡಿಯಲ್ಲಿ ರೈತರಿಗೆ ತೆಂಗನ್ನು ಸಂಪೂರ್ಣ ಆದಾಯದ ಮೂಲವನ್ನಾಗಿಸಲು, ತೆಂಗು ಕೃಷಿಯಲ್ಲಿ ನವೀನತೆಯನ್ನು ಉತ್ತೇಜಿಸುವುದು ಮತ್ತು ತೆಂಗಿನಕಾಯಿಯ ಮೌಲ್ಯವರ್ಧನೆ ಮತ್ತು ತೆಂಗು ಕೃಷಿಯ ಸುಸ್ಥಿರತೆ ಮುಖ್ಯ ಉದ್ದೇಶ. ಪ್ರಸ್ತುತ ಈ ಯೋಜನೆಯಡಿಯಲ್ಲಿ ತೆಂಗಿನಕಾಯಿ ಖರೀದಿ ಆರಂಭವಾಗಿದ್ದು, (ಸುಳ್ಯ, ಪಂಜ,ಕಡಬ,ನೆಲ್ಯಾಡಿ ಸವಣೂರು,ಬೆಳ್ತಂಗಡಿ) ಈ ಭಾಗಗಳಿಂದ ಖರೀದಿ ಪ್ರಕ್ರಿಯ ಚಾಲ್ತಿಯಲ್ಲಿದೆ. ಸುಳ್ಯ ತಾಲೂಕಿನ ದೊಡ್ಡ ತೋಟದಲ್ಲಿರುವ ಸಂಸ್ಥೆಯ ಕೊಬ್ಬರಿ ಸಂಸ್ಕರಣಾ ಘಟಕದಲ್ಲಿ ದಿನವೊಂದಕ್ಕೆ ಸರಿಸುಮಾರು ಎಂಟು ಟನ್ ಕೊಬ್ಬರಿ ತಯಾರಿಕೆಯ ಪ್ರಕ್ರಿಯ ಚಾಲ್ತಿಯಲ್ಲಿರುತ್ತದೆ. ಅಲ್ಲದೆ ಕಲ್ಪವೃಕ್ಷದ ಮೌಲ್ಯವರ್ಧಿತ ಉತ್ಪನ್ನವಾದ ತೆಂಗಿನಕಾಯಿಯ ಎಣ್ಣೆ ತೆಂಗಿನಕಾಯಿಯ ಚಟ್ಟೆ ಪುಡಿ ತೆಂಗಿನಕಾಯಿಯ ನೀರಿನಿಂದ ತಯಾರಿಸಿದ ಸಾವಯವ ಗೊಬ್ಬರಗಳು ಬಿಡುಗಡೆಗೊಳ್ಳಲಿದೆ .ಇದಲ್ಲದೆ ತೆಂಗಿನ ನಾರಿನಿಂದ ತಯಾರಿಸಲ್ಪಡುವ ಎರೆಹುಳು ಗೊಬ್ಬರ,ಕಾಂಪೊಸ್ಟ್ ತಯಾರಿಕೆ ಪ್ರಕ್ರಿಯೆಯಲ್ಲಿದೆ.
ಕಲ್ಪರಸ ಯೋಜನೆ:ಇದೇ ರೀತಿ ನಮ್ಮ ಕಲ್ಪರಸ ಯೋಜನೆಯ ಭಾಗವಾದ
ಸ್ಥಳದ ವಿಜಿಸ್ಟ್ರೇಶನ್ ಚಾಲ್ತಿಯಲ್ಲಿದ್ದು ಶೀಘ್ರದಲ್ಲಿಯೇ ರೈತರಿಗೆ ಇದರ ಪ್ರಯೋಜನವನ್ನು ಒದಗಿಸಲಾಗುತ್ತದೆ ಮತ್ತು ಇದರಿಂದ ರೈತನಿಗೆ 8 ತೆಂಗಿನ ಮರದಿಂದ ವರ್ಷಕ್ಕೆ ಸುಮಾರು 2 ಲಕ್ಷದಷ್ಟು ವಾರ್ಷಿಕ ಆದಾಯ ದೊರೆಯುತ್ತದೆ. ಕಲ್ಪಸಮೃದ್ಧಿ ಯೋಜನೆ ಚಿಂತೆಮುಕ್ತ ನಾಳೆಗಾಗಿ ವಿಶ್ವಾಸನೀಯ ಆದಾಯದ ಮೂಲ ‘ಕಲಸಮೃದ್ಧಿ ಯೋಜನೆ ಸ್ಥಿರ ಠೇವಣಿ ಮೇಲೆ 12% ಅಧಿಕ ಬಡ್ಡಿದರದ ಪುಯೋಜನವನ್ನು ನೀ ಡಲಾಗುತ್ತದೆ ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಮೂರು ವರ್ಷಗಳಲ್ಲಿ 40.5% ರಷ್ಟು ಆದಾಯವನ್ನು ವ್ಯವಸ್ಥಿತವಾಗಿ ಸುರಕ್ಷತೆಯೊಂದಿಗೆ ಪಡೆದುಕೊಳ್ಳಬಹುದು.ಹಿರಿಯನಾಗರಿಕರಿಗೆ ವಿಶೇಷಚೇತನರಿಗೆ ಮಾಜಿಸೈನಿಕರಿಗೆ ಹೆಚ್ಚುವರಿ 0.5% ಆಶಾದಾಯಕ ಬಡ್ಡಿದರ ವನ್ನು ಒದಗಿಸಿಕೊಡಲಾಗುವುದು. ಅಲ್ಲದೆ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ನೇರವಾಗಿ ವಿವಿಧ ರೀತಿಯ ರೈತರ ಸಾಲ ಯೋಜನೆಗಳು.
ಕಲ್ಪ ಸಂಪರ್ಕ ಯೋಜನೆ: ರೈತರಿಗೆ ಬೇಕಾದ ಸಮರ್ಪಕ ಮಾಹಿತಿಯನ್ನು ಒದಗಿಸಲು ತುಳು ಕೈಯಲ್ಲಿರುತ್ತದೆ. ಭಾಷೆ ಸಹಿತ ವಿವಿಧ ಭಾಷೆಗಳಲ್ಲಿ ಸ್ಪಂದಿಸುವ ಶುಲ್ಕ ರಹಿತ ದೂರವಾಣಿ ಸಂಖ್ಯೆ (ಟೋಲ್ ಫ್ರೀ ನಂಬರ್18007030120) ಇದರೊಂದಿಗೆ ಸಂಸ್ಥೆಯ ಸಂಪೂರ್ಣ ಮಾಹಿತಿಯುಳ್ಳ ವೆಬ್ಸೈಟ್ ಅತ್ಯಾಧುನಿಕವಾಗಿ ರಚನೆಗೊಳಿಸಲಾಗಿದೆ.
ಕಲ್ಪ ಸೇವಾ ಯೋಜನೆ: ಈ ಯೋಜನೆಯಲ್ಲಿ ಸಿಪ್ಪೆ ಸಹಿತ ಹಾಗೂ ಸಿಪ್ಪೆ ರಹಿತ ತೆಂಗಿನಕಾಯಿಯನ್ನು ಖರೀದಿಸುವುದು ಮಾತ್ರವಲ್ಲದೆ ಅಧಿಕ ಪುಮಾಣದ ತೆಂಗಿನಕಾಯಿಯನ್ನು ಖರೀದಿಸುವುದು ಮಾತ್ರವಲ್ಲದೆ ಅಧಿಕ ಪ್ರಮಾಣದ ತೆಂಗಿನಕಾಯಿ ಇದ್ದಲ್ಲಿ ಮನೆ ಬಾಗಿಲಿನಿಂದ ಖರೀದಿಸುವ ಯೋಜನೆ ಚಾಲ್ತಿಯಲ್ಲಿರುತ್ತದೆ. ಅಲ್ಲದೆ 120ಕ್ಕೂ ಅಧಿಕ ಮಹಿಳೆಯರಿಗೆ ತೆಂಗಿನಕಾಯಿ ಗೆರಟೆಯಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ತರಬೇತಿಯನ್ನು ನೀಡಲಾಗಿದೆ. ಹಾಗೆಯೇ ತಂಗುಕೊಯ್ತು ಗಾರರಿಗೆ ಉಚಿತ ಕೇರಾ ವಿಮಾ ಯೋಜನೆಯಡಿಯಲ್ಲಿ ಪ್ರತಿ ಕೊಯ್ಲುದಾರರಿಗೆ 5,00,000 ಲಕ್ಷ ಮೊತ್ತದ ಆರೋಗ್ಯವಿಮೆಯನ್ನು ಒದಗಿಸಲಾಗಿದೆ ಎಂಸು ಅವರು ವಿವರಿಸಿದರು.









