ಸುಳ್ಯ: ಶಿಕ್ಷಣ ಫೌಂಡೇಶನ್, ಡೆಲ್ ಸಂಸ್ಥೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ನಡೆಯುತ್ತಿರುವ ಗ್ರಾಮ ಡಿ ಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ಸುಳ್ಯ ತಾಲೂಕಿನಲ್ಲಿ ಆಯ್ಕೆಯಾದ 8 ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಡಿಜಿಟಲ್ ಸಾಧನಗಳಾದ
ಮೊಬೈಲ್ ಮತ್ತು ಸ್ಪೀಕರ್ಗಳ ಹಸ್ತಾಂತರ ಕಾರ್ಯಕ್ರಮ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ವಿತರಣೆ ಮಾಡಿದರು. ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಶಿಕ್ಷಣ ಫೌಂಡೇಶನ್ ನ ಗ್ರಾಮ ಡಿಜಿ ವಿಕಸನದ ಜಿಲ್ಲಾ ಸಂಯೋಜಕ ಲವಿಶ್ ಕುಮಾರ್ ಪಿ, ತಾಲೂಕು ಸಂಯೋಜಕ ದಿನೇಶ್ ಡಿ ಎಸ್, ಗ್ರಂಥಾಲಯ ಮೇಲ್ವಿಚಾರಕರು, ತಾ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೊಡ್ಡಣ್ಣ ಬರೆಮೇಲು, ಸತೀಶ್ ನಾಯ್ಕ್, ಚಂದ್ರಶೇಖರ ನೆಡಿಲು, ಹರೀಶ್ ಉಬರಡ್ಕ ಮತ್ತಿತರರು ಉಪಸ್ಥಿತರಿದ್ದರು.







