ಪಾಣತ್ತೂರು:ಮೂರು ದಿನಗಳ ಹಿಂದೆ ಪಾಣತ್ತೂರು ಮಂಞನಡ್ಕ ಹೊಳೆಯಲ್ಲಿ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ ಯುವಕನ ಮೃತದೇಹ ಪತ್ತೆಯಾಗಿದೆ. ಬೆಳಗಾವಿ ಮೂಲದ ದುರಗಪ್ಪ (19) ಮೃತಪಟ್ಟವರು. ಮೂರು ದಿನಗಳ ಹಿಂದೆ ಮಂಞನಡ್ಕದಲ್ಲಿ ಹೊಳೆಯ ಮುಳುಗು ಸೇತುವೆ ದಾಟುವ ಸಂದರ್ಭದಲ್ಲಿ
ಹೊಳೆಯಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು.ಇಂದು ಪಾಣತ್ತೂರು ವಟ್ಟಕುಂಡು ಎಂಬಲ್ಲಿ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.ಮೂರು ದಿನಗಳಿಂದ,ಕಂದಾಯ, ಅಗ್ನಿಶಾಮಕ ದಳ, ಪೊಲೀಸರು, ಎನ್ಡಿಆರ್ಎಫ್ ಮತ್ತು ಸ್ಥಳೀಯರು ಅವರಿಗಾಗಿ ಹುಡುಕಾಟ ನಡೆಸಿದ್ದರು. ಹೊಳೆಯ ಪೊದೆಗಳಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅವರ ಹುಟ್ಟೂರು ಬೆಳಗಾವಿಗೆ ಕೊಂಡೊಯ್ಯಲಾಗುವುದು ಎಂದು ತಿಳಿದು ಬಂದಿದೆ.





