ಕಮ್ಮಾಡಿ: ಭೂಕುಸಿತದ ಆತಂಕದ ಹಿನ್ನಲೆಯಲ್ಲಿ ಗಡಿಪ್ರದೇಶವಾದ ಕಮ್ಮಾಡಿಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಕಾಂಞಂಗಾಡ್ ಶಾಸಕ ಇ. ಚಂದ್ರಶೇಖರನ್, ಕಾಸರಗೋಡು ಜಿಲ್ಲಾಧಿಕಾರಿ ಇಂಪಾಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭೂ ಕುಸಿತದ ಆತಂಕದ ಹಿನ್ನಲೆಯಲ್ಲಿ ಕಮ್ಮಾಡಿ ಪತ್ತುಕುಡಿಯ 8 ಮನೆಗಳ 26 ಮಂದಿಯನ್ನು ಕಾಳಜಿ ಕೇಂದ್ರಕ್ಕಸ್ಥಳಾಂತರಿಸಲಾಗಿತ್ತು.ಪರಿಶೀಲನೆ ನಡೆಸಿದ
ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ಮಳೆ ಹೆಚ್ಚಾದರೆ ಈಗ ಕಮ್ಮಾಡಿಯಲ್ಲಿ ತೆರೆದ ಕಾಳಜಿ ಕೇಂದ್ರವನ್ನು ಕಲ್ಲಪಳ್ಳಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಉಪಜಿಲ್ಲಾಧಿಕಾರಿ ಸುಫಿಯಾನ್ ಅಹಮ್ಮದ್, ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಸನ್ನ ಪ್ರಸಾದ್, ಉಪಾಧ್ಯಕ್ಷ ಕುರ್ಯಾಕೋಸ್, ಪನತ್ತಡಿ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕಲ್ಲಪಳ್ಳಿ, ಪರಪ್ಪ ಬ್ಲೋಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ, ವೆಳ್ಳರಿಕುಂಡು ತಹಶೀಲ್ದಾರ್ ಪಿವಿ ಮುರಳಿ, ಪನತ್ತಡಿ ವಿಲೇಜ್ ಆಫೀಸರ್ ರೈನಿ, ಪರಪ್ಪ ಟಿಡಿಒ ಅಬ್ದುಲ್ ಸಲಾಂ, ಫಾರೆಸ್ಟ್ ಆಫೀಸರ್ ಶೇಷಪ್ಪ ಕಲ್ಲಾರ್,ಟಿಇಒ ಬಿಜು ಲೂಯಿಸ್, ಪನತ್ತಡಿ ಕೃಷಿ ಆಫೀಸರ್ ಅರುಣ್ ಜೋಸ್, ಪನತ್ತಡಿ ಪಂಚಾಯತ್ ಅಸಿಸ್ಟೆಂಟ್ ಸೆಕ್ರೆಟರಿ ವಿಜಯ ಕುಮಾರ್, ಹೆಲ್ತ್ ಜೆಪಿಎಚ್ ಶೋಭನಾ, ಆಶಾವರ್ಕರ್ ಬಿನ್ಸಿಐಸಾಕ್, ಎಸ್ಟಿ ಪ್ರಮೋಟರ್ ಕರುಣಾಕರ, ಮಾಜಿ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಪಿ ತಂಬಾನ್, ಪ್ರಮುಖರಾದ,ಮಧು ರಾಣಿ ಪುರಂ,ಚಿದಾನಂದ ಜಿ, ಮನೋಜ್ ಮಾಸ್ಟರ್, ಅಜಿಲ್ ಮಾತ್ಯು, ಸುಕುಮಾರನ್, ಪ್ರತಾಪ್ ಮತ್ತಿತರರು ಇದ್ದರು.