ಮುಕ್ಕೂರು: ಮುಕ್ಕೂರು ನೇಸರ ಯುವಕ ಮಂಡಲದ ಹತ್ತನೇ ವರ್ಷಾಚರಣೆ ಪ್ರಯುಕ್ತ ಜ.10 ಮತ್ತು 11 ರಂದು ನಡೆದ ದಶಪ್ರಣತಿ ಹಾಗೂ ಶಾಶ್ವತ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮದ ಲೆಕ್ಕಪತ್ರ ಮಂಡನೆ ಸಭೆಯು ಜ.23 ರಂದು ಮುಕ್ಕೂರಿನಲ್ಲಿ ನಡೆಯಿತು.ಕೋಶಾಧಿಕಾರಿ ರಾಮಚಂದ್ರ ಚೆನ್ನಾವರ ಲೆಕ್ಕಪತ್ರ ಮಂಡಿಸಿದರು. ವಿವಿಧ ಮೂಲಗಳಿಂದ
ಒಟ್ಟು 8,44,175 ರೂ.ಸಂಗ್ರಹವಾಗಿದ್ದು 5,73,763 ರೂ. ಖರ್ಚಾಗಿದೆ. ಒಟ್ಟು 2,70,412 ರೂ. ಉಳಿತಾಯದ ಲೆಕ್ಕಪತ್ರ ಮಂಡಿಸಲಾಯಿತು. ಇದಕ್ಕೆ ಸಭೆ ಪ್ರಶಂಸೆ ವ್ಯಕ್ತಪಡಿಸಿ ಅನುಮೋದನೆ ನೀಡಿತು.
ಮುಕ್ಕೂರು ನೇಸರ ದಶಪ್ರಣತಿ ಸಮಿತಿ ಸಂಚಾಲಕ ಕುಂಬ್ರ ದಯಾಕರ ಆಳ್ವ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಪೂಜಾರಿ ಮುಕ್ಕೂರು, ಉಪಾಧ್ಯಕ್ಷರಾದ ಸುಬ್ರಾಯ ಭಟ್ ನೀರ್ಕಜೆ, ಉಮೇಶ್ ಕೆಎಂಬಿ ಮಾತನಾಡಿ, ಸದಸ್ಯರಾದ ಜೈನುದ್ದೀನ್ ತೋಟದಮೂಲೆ, ಮೋಹನ ಬೈಪಡಿತ್ತಾಯ,ಪ್ರಗತಿಪರ ಕೃಷಿಕ ಸತ್ಯಪ್ರಸಾದ್ ಕಂಡಿಪ್ಪಾಡಿ, ನೇಸರ ದಶಪ್ರಣತಿ ಸಮಿತಿ ಸದಸ್ಯ ಹೊನ್ನಪ್ಪ ಗೌಡ ಚಾಮುಂಡಿಮೂಲೆ ಮಾತನಾಡಿದರು. ವೇದಿಕೆಯಲ್ಲಿ ಶಾಲಿನಿ ದಯಾಕರ ಆಳ್ವ, ಸುಜಾತ ವಿ ರಾಜ್ ಕಜೆ, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಾನಿಗಳಿಗೆ ಧನ್ಯತಾ ಪತ್ರ ವಿತರಿಸಲಾಯಿತು. ದಶಪ್ರಣತಿ ಪ್ರಯುಕ್ತ ಹೊರ ತಂದ ಅದೃಷ್ಟ ಚೀಟಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.












