ಸುಳ್ಯ:ಬಿಜೆಪಿ ಅಧಿಕಾರದಲ್ಲಿ ಇದ್ದರೂ ಈ ಭಾಗದ ಕೃಷಿಕರ ಬಹು ದೊಡ್ಡ ಸಮಸ್ಯೆಯಾದ ಅಡಿಕೆ ಹಳದಿ ರೋಗಕ್ಕೆ ಪರಿಹಾರ ಕಾಣದೇ ಇದ್ದುದ್ದು ಹಾಗು ಈ ಭಾಗದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟಯರ್ ಫ್ಯಾಕ್ಟರಿ ಅನುಷ್ಠಾನ ಆಗದೇ ಇದ್ದುದು ಅತ್ಯಂತ ದೊಡ್ಡ ವೈಫಲ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗು ಸಂಸದ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ದೇವರ ಗುಂಡದ ಅವರ ಮನೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಅಡಿಕೆ ಹಳದಿ ರೋಗಕ್ಕೆ ಶಾಶ್ವತ ಪರಿಹಾರ ಕಂಡು
The Sullia Mirror YouTube channel
ಅಡಿಕೆ ಹಳದಿ ರೋಗಕ್ಕೆ ಪರಿಹಾರ ಕಾಣದ್ದು ದೊಡ್ಡ ವೈಫಲ್ಯ-ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ–ನಮ್ಮ ಯೂಟ್ಯೂಬ್ ಚಾನೆಲ್ ವೀಕ್ಷಿಸಿ
ಕೊಳ್ಳಲು ಸಾಧ್ಯವಾಗಿಲ್ಲ. ಅದಕ್ಕಾಗಿ ಸಮಿತಿಯನ್ನು ರಚಿಸಲಾಗಿದ್ದರೂ ಏನೂ ಆಗಿಲ್ಲ.ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 25 ಕೋಟಿ ವಿಶೇಷ ಅನುದಾನ ಇರಿಸಿದ್ದರೂ ಅದು ಸಮರ್ಪಕವಾಗಿ ವಿನಿಯೋಗ ಆಗಿಲ್ಲ. ಇದು ದೊಡ್ಡ ವೈಫಲ್ಯವೇ ಆಗಿದೆ. ಅಡಿಕೆಗೆ ಕೆಜಿಗೆ 30 ರೂ ಆಗಿದ್ದ ಸಂದರ್ಭದಲ್ಲಿ ಸಂಪಾಜೆಯಿಂದ ಮಂಗಳೂರುವರೆಗೆ ಪಾದಯಾತ್ರೆ ಸೇರಿದಂತೆ ಅಡಿಕೆ ಕೃಷಿಕರ ಪರವಾಗಿ ದೊಡ್ಡ ಹೋರಾಟವನ್ನೇ ನಡೆಸಿದ್ದೇವೆ. ಅದರ ಪರಿಣಾಮವಾಗಿ ಬೆಲೆ ಏರಿಕೆ, ಬೆಂಬಲ ಬೆಂಬಲ ದೊರೆತಿತ್ತು. ಅಡಿಕೆಯ ಬೆಲೆ ಏರಿಕೆ ಮಾಡಲು ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಆಮದು ನೀತಿಗೆ ಹೊಸ ಭಾಷ್ಯ ಬರೆಯಲಾಗಿದೆ.30 ಶೇಖಡಾ ಇದ್ದಂತಹಾ ಆಮದು ಸುಂಕವನ್ನು ಶೇ.130 ಕ್ಕೆ ಏರಿಕೆ ಮಾಡಲಾಗಿದೆ.ಕಾಳ ಸಂತೆಯ ಮೂಲಕ ವಿದೇಶಿ ಅಡಿಕೆ ಮಾರಾಟ ಆಗುವುದಕ್ಕೆ ಕಡಿವಾಣ ಹಾಕಲಾಗಿದೆ. ಇದರ ಪರಿಣಾಮವಾಗಿ ಅಡಿಕೆಗೆ ಬೆಲೆ ಏರಿದೆ ಮತ್ತು ಮಾರುಕಟ್ಟೆ ಸ್ಥಿರತೆ ಉಂಟಾಗಿದೆ. ಅಡಿಕೆ, ಕಾಫಿ ಬೆಲೆಯಲ್ಲಿ ಏರಿಕೆ ಉಂಟಾದರೂ, ಹಲವು ಕ್ರಮಗಳನ್ನು ಕೈಗೊಂಡರೂ ರಬ್ಬರ್ ಬೆಲೆ ಏರಿಕೆ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು. ಕೃಷಿಕರ ಸೇವೆಯೇ ರಾಜಕಾರಣದ ಅತ್ಯಂತ ಖುಷಿಯ ವಿಷಯ ಎಂದು ಅವರು ಅಭಿಪ್ರಾಯಪಟ್ಟರು.
ಟಯರ್ ಫ್ಯಾಕಟರಿ ಅನುಷ್ಠಾನ ಆಗದ ಬಗ್ಗೆ ನೋವಿದೆ:
ಈ ಭಾಗದಲ್ಲಿ ಬೆಳೆಯುವ ರಬ್ಬರ್ಗೆ ಉತ್ತಮ ಧಾರಣೆ ಹಾಗು ಮೌಲ್ಯ ದೊರೆಯಬೇಕು ಎಂಬ ದೃಷ್ಠಿಯಿಂದ ತಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸುಳ್ಯದಲ್ಲಿ ಒಂದು ಟಯರ್ ಫ್ಯಾಕ್ಟರಿ ಸ್ಥಾಪನೆ ಮಾಡಬೇಕು ಎಂದು ಯೋಜನೆ ರೂಪಿಸಿದ್ದೆ. ಟಯರ್ ಕಂಪೆನಿಗಳನ್ನು, ಕೈಗಾರಿಕಾ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದ್ದೆ ಅಜ್ಜಾವರ ಮತ್ತು ತೊಡಿಕಾನದಲ್ಲಿ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆದಿತ್ತು. ಆದರೆ ತನ್ನ 11 ತಿಂಗಳ ಅವಧಿ ಮುಗಿದ ಬಳಿಕ ಅದಕ್ಕೆ ವೇಗ ಸಿಗದೆ ನೆನೆಗುದಿಗೆ ಬಿದ್ದು ಹಿನ್ನಡೆಯಾಯಿತು ಎಂದು ಸದಾನಂದ ಗೌಡ ಹೇಳಿದರು.
ಅತ್ಯಂತ ಸಂತೃಪ್ತ ರಾಜಕಾರಣಿ:
ಸುಳ್ಯದ ಮಣ್ಣಿನಿಂದ ರಾಜಕಾರಣ ಆರಂಭಿಸಿ 10 ವರ್ಷ ಶಾಸಕ, ನಾಲ್ಕು ಅವಧಿಗೆ ಸಂಸದ, ಮುಖ್ಯಮಂತ್ರಿ, ಕೇಂದ್ರ ಸಚಿವ, ರಾಜ್ಯಾಧ್ಯಕ್ಷ ಸೇರಿ ಎಲ್ಲಾ ಉನ್ನತ ಹುದ್ದೆಗಳನ್ನು ಅಲಂಕರಿಸುವ ಅವಕಾಶ ಸಿಕ್ಕಿದೆ. ರಾಜಕಾರಣ ಬದುಕಿನಲ್ಲಿ ಅತ್ಯಂತ ಸಂತೃಪ್ತನಾಗಿದ್ದೇನೆ. ಇದು ಈ ಮಣ್ಣಿನ ಗುಣ ಎಂದ ಅವರು ಹೇಳಿದರು. ಯಾವಾಗಲೂ ಅಧಿಕಾರ ನಮ್ಮಲ್ಲಿಯೇ ಇರಬೇಕು ಎಂಬ ಭಾವನೆ ಕಂಡಿತಾ ಇಲ್ಲ. ಹೊಸಬರಿಗೆ ಅವಕಾಶ ನೀಡಬೇಕು ಎಂದ ಅವರು ಕಳೆದ 28 ವರ್ಷದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ಸಕಾಲ ವ್ಯವಸ್ಥೆಯನ್ನು ತಾನು ಮುಖ್ಯಮಂತ್ರಿ ಅಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದೆ. ಸಕಾಲ ಯಶಸ್ವಿಯಾಗಿ ಅನುಷ್ಠಾನಾದರೆ ಸರಕಾರಿ ಇಲಾಖೆಯಲ್ಲಿ ಶೇ.60 ರಷ್ಟು ಭ್ರಷ್ಟಾಚಾರ ಕಡಿಮೆ ಮಾಡಬಹುದು. ಸಕಾಲ ಯೋಜನೆಯನ್ನು ಸರಕಾರ ಯಶಸ್ವಿಯಾಗಿ ಅನುಷ್ಠಾನ ಮಾಡಬೇಕು ಎಂದು ಅವರು ಒತ್ತಾಯಿಸಿದರು.