ಚೆನ್ನೈ:ವಾಯುಭಾರ ಕುಸಿತದಿಂದಾಗಿ ಬಂಗಾಲಕೊಲ್ಲಿ ಸಮುದ್ರದ ಕಡಿಮೆ ಒತ್ತಡ ವಲಯದಲ್ಲಿ ಡಿ.3 ರವೇಳೆಗೆ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯು ಸೂಚನೆ ನೀಡಿದೆ. ಇದರ ಪರಿಣಾಮ, ತಮಿಳುನಾಡಿನ ವಿವಿಧೆಡೆ ಭಾಗಗಳಲ್ಲಿ
ಮುಂದಿನ ಐದು ದಿನ ಧಾರಾಕಾರ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಿದೆ. ಕಳೆದ ಕೆಲ ದಿನಗಳಿಂದ ಚೆನ್ನೈ ಪರಿಸರದಲ್ಲಿ ಭಾರೀ ಮಳೆ ಸುರಿದಿತ್ತು.‘ಚೆನ್ನೈ ಮತ್ತು ತಮಿಳುನಾಡಿನ ಉತ್ತರ ಭಾಗದ ಜಿಲ್ಲೆಗಳಲ್ಲಿ ಡಿಸೆಂಬರ್ 5ರ ವರೆಗೆ ಧಾರಾಕಾರ ಮಳೆಯಾಗುವ ಸೂಚನೆಗಳಿವೆ’ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಚಂಡಮಾರುತವು ಮೊದಲು ಪಶ್ಚಿಮಾಭಿಮುಖವಾಗಿ, ಡಿ. 3ರ ನಂತರ ಉತ್ತರಾಭಿಮುಖವಾಗಿ ಸಾಗಲಿದೆ. ಇದರಿಂದಾಗಿ, ತಮಿಳುನಾಡಿನ ಉತ್ತರದ ಪ್ರದೇಶಗಳು, ಆಂಧ್ರಪ್ರದೇಶದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಮಳೆಯಾಗಬಹುದು ಎಂದು ತಿಳಿಸಿದೆ.