ಬಳ್ಪ:ವಿದ್ಯುತ್ ಶಾಕ್ ತಗುಲಿ ಲೈನ್ಮ್ಯಾನ್ ಮೃತಪಟ್ಟ ಘಟನೆ ಜ.5 ರಂದು ಬಳ್ಪದಿಂದ ವರದಿಯಾಗಿದೆ. ಬಳ್ಪ ಗ್ರಾಮದ ಪಾದೆ ಸಮೀಪದ ನರಿಯಂಗ ಎಂಬಲ್ಲಿ ಘಟನೆ ಸಂಭವಿಸಿದೆ. ಹಾಸನ ಜಿಲ್ಲೆಯ ಹೊಳೆ ನರಸೀಪುರ ಮೂಲದ ರಘು ಎಸ್.ಆರ್. (32)ಮೃತ ಪಟ್ಟವರು ಎಂದು ತಿಳಿದು ಬಂದಿದೆ.. ಅವರು ವಿದ್ಯುತ್ ದುರಸ್ಥಿ ನಡೆಸಲು ತೆರಳಿದ ವೇಳೆ ಘಟನೆ ಸಂಭವಿಸಿದೆ. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೋಲಿಸರು ಭೇಟಿ ನೀಡಿದ್ದಾರೆ. ಸುಮಾರು 1.5 ವರುಷಗಳಿಂದ ಪಂಜ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು









