ತಿರುವನಂತಪುರಂ:ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಇತರ ಆಟಗಾರರು ತಿರುವನಂತಪುರದ ಐತಿಹಾಸಿಕ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಜ.30ರಂದು ಬೆಳಿಗ್ಗೆ ಕ್ರಿಕೆಟಿಗರು ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ
ಭೇಟಿ ನೀಡಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಾಯಕ ಸೂರ್ಯಕುಮಾರ್ ಯಾದವ್,ಕುಲ್ದೀಪ್ ಯಾದವ್,ಅಕ್ಷರ್ ಪಟೇಲ್, ರಿಂಕು ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ ಮತ್ತಿತರರು ಸಾಂಪ್ರದಾಯಿಕ ಉಡುಗೆ ತೊಟ್ಟು ದರ್ಶನ ಪಡೆದರು. ಆಟಗಾರರು ದೇವಸ್ಥಾನದ ನಿಯಮದಂತೆ ಸಾಂಪ್ರದಾಯಿಕ ಕೇರಳೀಯ ಉಡುಗೆ (ಮುಂಡು/ಧೋತಿ) ಧರಿಸಿದ್ದರು.
ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯ ಜ.31ರಂದು ನಡೆಯಲಿದೆ.ಇದಕ್ಕಾಗಿ ತಂಡ ಜ.29ರಂದು ತಿರುವನಂತಪುರಕ್ಕೆ ಆಗಮಿಸಿದ್ದರು.





