ಸುಳ್ಯ:ಮೊದಲೆಲ್ಲ ದೀಪಾವಳಿ ಬಂದರೆ ಗಾಂಧಿನಗರದಿಂದ ಪೈಚಾರ್ ತನಕ ಅಲ್ಲಲ್ಲಿ ಪಟಾಕಿ ಅಂಗಡಿ ತೆರೆಯಲಾಗುತ್ತಿತ್ತು. ಆದರೆ ಈ ಬಾರಿ ಅಲ್ಲಲ್ಲಿ ಪಟಾಕಿ ಅಂಗಡಿ ತೆರೆಯಲು ಅವಕಾಶ ನೀಡಿಲ್ಲ. ಸುಳ್ಯ ನಗರದಲ್ಲಿ ಒಂದು ಕಡೆಯಲ್ಲಿ ಮಾತ್ರ ಪಟಾಕಿ ಅಂಗಡಿ ತೆರೆಯಲು ತಾಲೂಕು ಆಡಳಿತ, ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿಯ ಮೈದಾನದಲ್ಲಿ ಪಟಾಕಿ ಅಂಗಡಿ ತೆರೆಯಲು


ಅವಕಾಶ ನೀಡಲಾಗಿದೆ. ನಗರದಲ್ಲಿ 10 ಸ್ಟಾಲ್ಗಳನ್ನು ತೆರೆಯಲಾಗಿದೆ. ಸುಳ್ಯದಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಅಂಗಡಿಗಳನ್ನು ಒಂದೇ ಕಡೆಯಲ್ಲಿ ತೆರೆಯುವುದು ಇದೇ ಪ್ರಥಮ. ಪ್ರತಿ ಸ್ಟಾಲ್ಗಳಿಗೆ ಸ್ಟಾಲ್ ಸಂಖ್ಯೆ ನೀಡಲಾಗಿದೆ. ಈ ಬಾರಿ ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು ಸರಕಾರ ಪಟಾಕಿ ಅಂಗಡಿ ತೆರೆಯಲು, ಪಟಾಕಿ ಮಾರಾಟಕ್ಕೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು ಖಡಕ್ ಸೂಚನೆಗಳನ್ನು ನೀಡಿದೆ. ಸುಳ್ಯದ ನಗರ ಮಾತ್ರವಲ್ಲದೆ ವಿವಿಧ ಕಡೆಗಳಲ್ಲಿ ಪಟಾಕಿ ಅಂಗಡಿಗಳನ್ನು ಒಂದೇ ಕಡೆ ತೆರೆಯಲು ಸೂಚಿಸಲಾಗಿದೆ. ಸರಕಾರ ನೀಡಿದ ಮಾರ್ಗಸೂಚಿಗಳನ್ನು ಅನುಸರಿಸಿ ಪಟಾಕಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು ಒಂದೇ ಕಡೆ ಅಂಗಡಿ ತೆರೆಯಲು ಸೂಚಿಸಲಾಗಿದೆ ಎಂದು ಸುಳ್ಯ ಆರಕ್ಷಕ ಉಪ ನಿರೀಕ್ಷಕಕ ಈರಯ್ಯ ದೂಂತೂರು ತಿಳಿಸಿದ್ದಾರೆ.









