ಕಲ್ಲಪಳ್ಳಿ:ಸಿಪಿಐಎಂ ಪಕ್ಷದ 24ನೇ ಪಾರ್ಟಿ ಮಹಾಧಿವೇಶನದ ಭಾಗವಾಗಿ ನಡೆಯುವ ಪಾಣತ್ತೂರು ಲೋಕಲ್ ಸಮ್ಮೇಳನ ಕಲ್ಲಪಳ್ಳಿಯಲ್ಲಿ ಅ.1ರಂದು ನಡೆಯಿತು. ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಸಮ್ಮೇಳನ ಅರಂಭಗೊಂಡಿತು. ಸಿಪಿಐಎಂ ಕಾಸರಗೋಡು ಜಿಲ್ಲಾ
ಕಾರ್ಯದರ್ಶಿ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಎಂ.ವಿ.ಬಾಲಕೃಷ್ಣನ್ ಮಾಸ್ತರ್ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಎಂ.ವಿ.ಕೃಷ್ಣನ್, ಜಯಾನಂದ್, ಒಕ್ಲಾವ್ ಕೃಷ್ಣನ್, ಏರಿಯಾ ಸಮಿತಿ ಸದಸ್ಯರಾದ ಪಿ.ತಂಬಾನ್, ಪಿ.ಜಿ.ಮೋಹನ್, ಎಂ.ಸಿ.ಮಾಧವ, ಉನ್ನಿಕೃಷ್ಣನ್ ಲೋಕಲ್ ಸಮಿತಿ ಕಾರ್ಯದರ್ಶಿ ಬಿನು ವರ್ಗೀಸ್, ಮುಖಂಡರಾದ ಅರುಣ್ ರಂಗತ್ತಮಲೆ, ಪ್ರಸನ್ನ ಪ್ರಸಾದ್ ಮತ್ತಿತರರು ಇದ್ದರು. ಮನೋಜ್ ಮಾಸ್ತರ್ ಧ್ವಜಾರೋಹಣ ನೆರವೇರಿಸಿದರು. ಸ್ವಾಗತ ಸಮಿತಿ ಕಾರ್ಯದರ್ಶಿ ಅರುಣ್ ರಂಗತ್ತಮಲೆ ಸ್ವಾಗತಿಸಿದರು. ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ದಿನಪೂರ್ತಿ ನಡೆದ ಸಮ್ಮೇಳನದಲ್ಲಿ ಉದ್ಘಾಟನೆ ಬಳಿಕ ಪ್ರತಿನಿಧಿ ಸಮ್ಮೇಳನ, ವರದಿ ಮಂಡನೆ, ಚರ್ಚೆ, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಲೋಕಲ್ ಕಾರ್ಯದರ್ಶಿಯಾಗಿ ಬಿನು ವರ್ಗೀಸ್ ಪುನರಾಯ್ಕೆಯಾದರು. 13 ಮಂದಿಯ ಲೋಕಲ್ ಸಮಿತಿಯನ್ನು ಆಯ್ಕೆ ಮಾಡಲಾಯಿತು.