ಸುಳ್ಯ:ದ.ಕ ಜಿಲ್ಲಾ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಸಹ ಉಸ್ತುವಾರಿಗಳೂ ಹಾಗೂ ಪ್ರಚಾರ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿದೆ.ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಹಾಗೂ
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಬಿ. ರಮನಾಥ ರೈ ಯವರು ಆದೇಶಿಸಿದ್ದಾರೆ.ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಸಹ ಉಸ್ತುವಾರಿಗಳಾಗಿ ನಿತ್ಯಾನಂದ ಮುಂಡೋಡಿ, ರಾಧಾಕೃಷ್ಣ ಬೊಳ್ಳೂರು, ಸೋಮಶೇಖರ ಕೊಯಿಂಗಾಜೆ, ಡಾ. ರಘು,ಚಂದ್ರಲಿಂಗಂ, ಪಿ.ಪಿ.ವರ್ಗೀಸ್, ಕೆ.ಪಿ.ಥೋಮಸ್ ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಪ್ರಚಾರ ಸಮಿತಿ ಅದಸ್ಯರಾಗಿ ಸಚಿನ್ ರಾಜ್ ಶೆಟ್ಟಿ, ಮಹಮ್ಮದ್ ಫವಾಝ್, ಉಷಾ ಅಂಚನ್, ಮಹೇಶ್ ಕುಮಾರ್ ಕರಿಕ್ಕಳ ಅವರನ್ನು ನೇಮಕ ಮಾಡಲಾಗಿದೆ.