ಸುಳ್ಯ:ಕಾಂಗ್ರೆಸ್ನಲ್ಲಿ ಉಂಟಾಗಿರುವ ಬೆಳವಣಿಗೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಒಂದು ಬಣ ಕಾಂಗ್ರೆಸ್ ಉಳಿಸಿ ಅಭಿಯಾನ ಆರಂಭಿಸಿದೆ. ಕಾಂಗ್ರೆಸ್ನ ಕೆಲವು ಮುಖಂಡರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಉಳಿಸಿ ಆಂದೋಲನ ನಡೆಸಲಾಗುತ್ತಿದ್ದು ಸುಳ್ಯವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ಸೆ.18 ರಂದು ಸುಳ್ಯ ಲಯನ್ಸ್ ಸಭಾಂಗಣದಲ್ಲಿ ಆರಂಭಗೊಂಡಿದೆ. ಸಭೆಯಲ್ಲಿ ಮಾತನಾಡಿದ ಪ್ರಮುಖರು ಕಾಂಗ್ರೆಸ್ ನೇತೃತ್ವದ ವಿರುದ್ಧ ಆಸಮಾಧಾನ
ವ್ಯಕ್ತಪಡಿಸಿದ್ದಾರೆ. ಸುಳ್ಯದಲ್ಲಿ ಕಳೆದ ಚುನಾವಣೆಯ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಮೂಡಿರುವ ಗೊಂದಲ, ಮತ್ತು ಇತ್ತೀಚಿಗೆ ಕೆಲವೊಂದು ಸಮಿತಿಗಳಿಗೆ ಬಿಜೆಪಿಯವರನ್ನು ಮತ್ತು ಕಾಂಗ್ರೆಸೇತರ ವ್ಯಕ್ತಿಗಳಿಗೆ ನಾಮನಿರ್ದೇಶನ ಮಾಡಿರುವುದು,ಅಧಿಕಾರಿಗಳ ವರ್ಗಾವಣೆ, ಹಾಗು ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿರುವ ಬೆಳವಣಿಗೆಗಳ ಬಗ್ಗೆ ಉಂಟಾದ ಅಸಮಾಧಾನದ ಹಿನ್ನಲೆಯಲ್ಲಿ ಕಾರ್ಯಕರ್ತರ ಸಭೆ ಕರೆಯಲಾಗಿದೆ.
ಮುಖಂಡರಾದ ಎಂ.ವೆಂಕಪ್ಪ ಗೌಡ, ಮಹೇಶ್ ಕುಮಾರ್ ಕರಿಕ್ಕಳ, ಕೆ.ಗೋಕುಲ್ದಾಸ್, ಶಶಿಧರ ಎಂ.ಜೆ, ಬಾಲಕೃಷ್ಣ ಭಟ್ ಕೊಡೆಂಕೇರಿ, ಸತ್ಯಕುಮಾರ್ ಆಡಿಂಜ,ಎಸ್.ಕೆ.ಹನೀಫ್, ಜಿ.ಕೆ.ಹಮೀದ್, ಭವಾನಿಶಂಕರ ಕಲ್ಮಡ್ಕ, ರಹೀಂ ಬೀಜದಕಟ್ಟೆ, ರವೀಂದ್ರ ರುದ್ರಪಾದ,ಚೇತನ್ ಕಜೆಗದ್ದೆ, ಶ್ರೀಲತಾ ಪ್ರಸನ್ನ, ತಾಜುದ್ದೀನ್ ಅರಂತೋಡು, ಬಾಲಕೃಷ್ಣ ಮರೀಲ್, ಪರಶುರಾಮ ಚಿಲ್ತಡ್ಕ, ಶಿವಕುಮಾರ್ ಕಂದಡ್ಕ, ಪವನ್ ಮುಂಡ್ರಾಜೆ, ಪರಶುರಾಮ ಚಿಲ್ತಡ್ಕ, ದಿನೇಶ್ ಸರಸ್ವತಿಮಹಲ್ ಮತ್ತಿತರರು ಭಾಗವಹಿಸಿದ್ದರು.