ಪುತ್ತೂರು:ಪುತ್ತೂರು ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನಾ ಕಾರ್ಯಕ್ರಮ ಏ.1ರಂದು ದರ್ಬೆ ಬೈಪಾಸ್ ಜಂಕ್ಷನ್ ಬಳಿಯ ರೈ ಎಸ್ಟೇಟ್ ಕಟ್ಟಡದಲ್ಲಿ ನಡೆಯಿತು.ಶಾಸಕ ಅಶೋಕ್ ಕುಮಾರ್ ರೈ ಕಚೇರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ , ಕಾಂಗ್ರೆಸ್ ಪ್ರಮುಖರು ಉಪಸ್ಥಿತರಿದ್ದರು. ಇಂದು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ
ಚುನಾವಣಾ ಪ್ರಚಾರ ನಡೆಸಿದರು. ಗೆಜ್ಜೆಗಿರಿ ನಂದನ ಬಿತ್ತಿಲ್, ಪಡುಮಲೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ಚುನಾವಣಾ ಪ್ರಚಾರ ಆರಂಭಿಸಿದ ಅವರು ಪಡುಮಲೆ ಜುಮ್ಮಾ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ ಕಾಂಗ್ರೆಸ್ ಪದ್ಮರಾಜ್ ಆರ್. ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್. ಭಟ್ ಪ್ರಾರ್ಥನೆ ನೆರವೇರಿಸಿ ಪ್ರಸಾದ ನೀಡಿದರು.
ಈ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ಚುನಾವಣಾ ಪ್ರಚಾರ ಸಮಿತಿ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್, ವಿಜಯ್ ಕುಮಾರ್ ಸೊರಕೆ, ಮಹೇಶ್ಚಂದ್ರ ಸಾಲ್ಯಾನ್, ಶ್ರೀಪ್ರಸಾದ್ ಪಾಣಾಜೆ, ಪುಡಾ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸುಳ್ಯದ ಮುಖಂಡರಾದ ಮಹಮ್ಮದ್ ಕುಂಞಿ ಗೂನಡ್ಕ, ಲಕ್ಷ್ಮೀಶ ಗಬ್ಬಲಡ್ಕ, ಬಿಟ್ಟಿ ಬಿ.ನೆಡುನಿಲಂ, ವಸಂತ ಪೆಲ್ತಡ್ಕ, ಕೆ.ಪಿ.ಜಾನಿ ಕಲ್ಲುಗುಂಡಿ, ಎ.ಕೆ.ಇಬ್ರಾಹಿಂ ಕಲ್ಲುಗುಂಡಿ, ಲುಕಾಸ್ ಟಿ.ಐ, ಅಚ್ಚುತ ಮಲ್ಕಜೆ ಮತ್ತಿತರರು ಉಪಸ್ಥಿತರಿದ್ದರು.