ಹೊಸದಿಲ್ಲಿ: ಗೃಹೋಪಯೋಗಿ ಎಲ್ಪಿಜಿ ಸಿಲಿಂಡರ್ನ ದರ ರೂ.200 ಕಡಿತಗೊಂಡ ಬೆನ್ನಲ್ಲೇ ಇದೀಗ ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ರೂ. 158 ಕಡಿತಗೊಳಿಸಿವೆ. ಈ ಪರಿಷ್ಕೃತ ದರಗಳು ಇಂದಿನಿಂದ ಜಾರಿಗೆ ಬರಲಿವೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ರೂ. 200 ಕಡಿತಗೊಳಿಸಿತ್ತು. ಸುಳ್ಯದಲ್ಲಿ ವಾಣೀಜ್ಯ ಬಳಕೆಯ ಸಿಲಿಂಡರ್ ದರ 1534 ಆಗಿದ್ದು ಸಾಗಾಟ ದರ ಸೇರಿ 1600 ಆಗಿದೆ. ಗೃಹ ಬಳಕೆಯ ಸಿಲಿಂಡರ್ ದರ ದರ ಕಡಿತ ಆದ ಬಳಿಕ ಸಾಗಾಟ ದರ ಸೇರಿ 970 ಆಗಿದೆ ಎಂದು ಸರಬರಾಜುದಾರರು ತಿಳಿಸಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post